ಜಮ್ಮು-ಕಾಶ್ಮೀರ ಧ್ವಜ 
ದೇಶ

ಕಾಶ್ಮೀರ ಬಾವುಟಕ್ಕೆ ರಾಷ್ಟ್ರಧ್ವಜದ ಸಮಾನ ಸ್ಥಾನ ಆದೇಶಕ್ಕೆ ಜಮ್ಮು-ಕಾಶ್ಮೀರ ಹೈಕೋರ್ಟ್ ತಡೆಯಾಜ್ಞೆ

ಜಮ್ಮು-ಕಾಶ್ಮೀರದಲ್ಲಿ ಸರ್ಕಾರಿ ವಾಹನ ಹಾಗೂ ಸರ್ಕಾರದ ಕಟ್ಟಡಗಳಲ್ಲಿ ಬಳಕೆ ಮಾಡುವ ಧ್ವಜದ ಬಗ್ಗೆ ಹೊಸ ಗೊಂದಲವೊಂದು ಉಂಟಾಗಿದೆ.

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸರ್ಕಾರಿ ವಾಹನ ಹಾಗೂ ಸರ್ಕಾರದ ಕಟ್ಟಡಗಳಲ್ಲಿ ಬಳಕೆ ಮಾಡುವ ಧ್ವಜದ ಬಗ್ಗೆ ಹೊಸ ಗೊಂದಲವೊಂದು ಉಂಟಾಗಿದೆ.
ಸರ್ಕಾರಿ ಕಟ್ಟಡ, ಸರ್ಕಾರಿ ವಾಹನಗಳ ಮೇಲೆ ರಾಷ್ಟ್ರಧ್ವಜ ಹಾಗೂ ರಾಜ್ಯದ ಧ್ವಜವನ್ನು ಹಾಕಬೇಕು ಎಂದು ಡಿ.27 ರಂದು ಜಮ್ಮು-ಕಾಶ್ಮೀರ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಇದೇ ಆದೇಶಕ್ಕೆ ಈಗ ತಡೆ ನೀಡಲಾಗಿದೆ.
ರಾಷ್ಟ್ರಧ್ವಜದ ಜತೆಗೆ ರಾಜ್ಯ ಧ್ವಜವನ್ನು ಸಾಂವಿಧಾನಿಕ ಸಂಸ್ಥೆಗಳ ಅಧಿಕೃತ ಕಚೇರಿಗಳು ಹಾಗೂ ವಾಹನಗಳ ಮೇಲೆ ಆರೋಹಿಸುವಂತೆ  ನೀಡಿದ್ದ ಜಮ್ಮು-ಕಾಶ್ಮೀರ ಹೈಕೋರ್ಟ್‌ ಆದೇಶವನ್ನು ಬಿಜೆಪಿ ಪ್ರಶ್ನಿಸಿತ್ತು.
ಸಂವಿಧಾನದ 370 ನೇ ವಿಧಿ ಪ್ರಕಾರ ರಾಷ್ಟ್ರಧ್ವಜದೊಂದಿಗೆ ರಾಜ್ಯಧ್ವಜವನ್ನೂ ಆರೋಹಿಸುವ ಅಧಿಕಾರ ಭಾರತದಲ್ಲಿ ಜಮ್ಮು-ಕಾಶ್ಮೀರಕ್ಕೆ ಮಾತ್ರ ನೀಡಲಾಗಿತ್ತು. ಆದರೆ ಈಗ ಹೈಕೋರ್ಟ್ ತನ್ನ ಆದೇಶಕ್ಕೆ ತಡೆ ನೀಡಿದೆ. ಸಾಂವಿಧಾನಿಕ ಸಂಸ್ಥೆಗಳ  ಕಚೇರಿ ಹಾಗೂ ವಾಹನಗಳ ಮೇಲೆ ರಾಷ್ಟ್ರಧ್ವಜದ ಜತೆಗೆ ರಾಜ್ಯ ಧ್ವಜವನ್ನೂ ಹಾರಾಟ ಮಾಡಬೇಕು ಎಂದು ಜಮ್ಮು-ಕಾಶ್ಮೀರದ ಪಿಡಿಪಿ- ಬಿಜೆಪಿ ಸಮ್ಮಿಶ್ರ ಸರ್ಕಾರ ಮಾ.12 ರಂದು ಸುತ್ತೋಲೆ ಹೊರಡಿಸಿತ್ತು.
ಆದರೆ ಒಂದೇ ದೇಶದಲ್ಲಿ 2 ಧ್ವಜ ಬೇಡ ಎಂದು ಬಿಜೆಪಿ ನಿಲುವು ತಳೆದಿತ್ತು. ಹೀಗಾಗಿ ಸರ್ಕಾರ ಮಾ.12ರ ಸುತ್ತೋಲೆಯನ್ನು ಮರುದಿನವೇ ಹಿಂಪಡೆದಿತ್ತು. ಇದರ ವಿರುದ್ಧ ಅಬ್ದುಲ್‌ ಖಯೂಂ ಖಾನ್‌  ನ್ಯಾಯಾಲಯದ ಮೆಟ್ಟಿಲೇರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!

ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!