ಲಕ್ನೋ: ಶಹಜಾನಪುರ ಪತ್ರಕರ್ತನ ಹತ್ಯೆ ಪ್ರಕರಣ ಸಂಬಂಧ ಮೃತನ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ 30 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ, ಮೃತ ಪತ್ರಕರ್ತ ಜಗೇಂದ್ರ ಸಿಂಗ್ ಕುಟುಂಬದ ಇಬ್ಬರಿಗೆ ನೌಕರಿ ನೀಡುವ ಭರವಸೆ ನೀಡಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಕರಣದ ಸಿಬಿಐ ತನಿಖೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಮೃತ ಪತ್ರಕರ್ತ ಜಗೇಂದ್ರ ಸಿಂಗ್ ಕುಟುಂಬಸ್ಥರು ಪ್ರಕರಣವನ್ನು ಸಿಬಿಐಆ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಜೊತೆಗೆ ಸಚಿವ ರಾಮಮೂರ್ತಿ ವರ್ಮಾ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದ್ದರು. ಸುಪ್ರಿಂಕೋರ್ಟ್ ಗೂ ಅರ್ಜಿ ಸಲ್ಲಿಸಲಾಗಿದ್ದು, ಈ ಸಂಬಂಧ ಸುಪ್ರಿಂ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳಿಗೆ ನೊಟೀಸ್ ನೀಡಿತ್ತು.
ಅಖಿಲೇಶ್ ಯಾದವ್ ಸಂಪುಟದಲ್ಲಿ ಸಚಿವರಾಗಿರುವ ರಾಮ ಮೂರ್ತಿ ವರ್ಮಾ ಭ್ರಷ್ಟಾಚಾರದ ವಿರುದ್ಧ ಫೇಸ್ ಬುಕ್ ನಲ್ಲಿ ಬರೆದಿದ್ದಕ್ಕೆ, ಸಚಿವನ ಬೆಂಬಲಿಗರು ಜುಲೈ 1 ರಂದು ಜಗೇಂದ್ರ ಸಿಂಗ್ ಅವರನ್ನು ಬೆಂಕಿ ಹಚ್ಚಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜುಲೈ 8ರಂದು ಮೃತ ಪಟ್ಟಿದ್ದರು.