ಕ್ಯಾಂಬರ್ವೆಲ್ ನ ಮತದಾನ ಕ್ಷೇತ್ರ
ಭಾರತದಲ್ಲಿ ಚುನಾವಣೆ ನಡೆದಾಗ ಅಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಭಾರತೀಯರೇ ಆಗಿರುತ್ತಾರೆ. ಆದರೆ, ಒಂದು ದೇಶದ ಅಭ್ಯರ್ಥಿಯನ್ನು ಇನ್ನೊಂದು ದೇಶದ ಜನರು ಗೆಲ್ಲಿಸುವುದರ ಬಗ್ಗೆ ಕೇಳಿದ್ದೀರಾ? ಇಲ್ಲವಾದಲ್ಲಿ ಒಮ್ಮೆ ಲಂಡನ್ ಕಡೆ ತಿರುಗಿ ನೋಡಿ. ಹೌದು, ಇಲ್ಲಿಯ ಚುನಾವಣೆಯಲ್ಲಿ ಅಭ್ಯರ್ಥಿಯನ್ನ ಗೆಲ್ಲಿಸಬೇಕೆಂದರೆ ಭಾರತೀಯರ ಸಿಂಹ ಪಾಲಿದೆ. ಇದೇ ಬೆನ್ನಲ್ಲೇ ಈಗ ಲಂಡನ್‍ನಲ್ಲಿ ಚುನಾವಣಾ ಸಮಯ!.
ಭಾರತೀಯರ ಪರ ರಾಜಕಾರಣಿಗಳು ನಿಲುವು
ಭಾರತೀಯರ ಹೃದಯ ಗೆಲ್ಲುತ್ತಿರುವ ಕನ್ಸರ್ವೇಟಿವ್ಸ್
- ನಾಯಕತ್ವ: ಡೇವಿಡ್ ಕೆಮರಾನ್ (ಹಾಲಿ ಪ್ರಧಾನಿ).
- ಭಾರತದೊಂದಿಗಿನ ಸಂಬಂಧ ಗಟ್ಟಿಗೊಳಿಸುವುದು
- ಪ್ರಮುಖ ಆರ್ಥಿಕ ವಹಿವಾಟು ಮತ್ತಷ್ಟು ಹೆಚ್ಚಳ
- ಏಷ್ಯಾದ ಆನೆಗಳನ್ನು ಉಳಿಸುವ ನಿಟ್ಟಿನಲ್ಲಿ ಭಾರತಕ್ಕೆ ಸಹಾಯ
- ಸಲಿಂಗ ವಿವಾಹ ಕಾನೂನುಬದ್ಧಗೊಳಿಸುವುದು
ಲೇಬರ್‍ನಿಂದಲೂ ಭಾರತೀಯರಿಗೆ ಆಫರ್
- ನಾಯಕತ್ವ - ಡೇವಿಡ್ ಮಿಲಿಬ್ಯಾಂಡ್
- ವರ್ಣಭೇದ ನಿರ್ಮೂಲನೆ ಮಾಡಿ ಭಾರತೀಯರಿಗೆ ಬ್ರಿಟೀಷ್ ಪೊಲೀಸ್ ಫೋರ್ರ್ಸ್, ನ್ಯಾಯಾಂಗ, ಸಿವಿಲ್ ಸರ್ವೀಸ್‍ಗಳಲ್ಲಿ ಉದ್ಯೋಗ
- ಸಂಸ್ಕೃತಿಗಳ ನಡುವಿನ ಸಂಬಂಧವನ್ನು ಬಲಪಡಿಸುವುದು
- ಅಪರಾಧಗಳ ತಡೆಗಟ್ಟುವಿಕೆ
- ಗುಜರಾತಿ, ಪಂಜಾಬಿ, ಬೆಂಗಾಲಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ
ಸ್ಕಾಟಿಷ್ ನ್ಯಾಷನಲ್ ಪಾರ್ಟಿಯಿಂದ ವಿವಿಧ ಆಫರ್‍ಗಳು
- ನಾಯಕತ್ವ: ನಿಕೋಲಾ ಸ್ಟರ್ಜಿಯನ್
- ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವೀಸಾ
- ಪದವಿ ಮುಗಿದ ಬಳಿಕ ಸ್ಕಾಟ್ಲೆಂಡ್‍ನಲ್ಲಿ 2ವರ್ಷ ಕೆಲಸ ಮಾಡಲು ಅನುಮತಿ
- ಲಂಡನ್ನಿನಾದ್ಯಂತ 25 ಸಿಖ್ ಶಾಲೆಗಳ ನಿರ್ಮಾಣ
- ಸಿಖ್ಖರನ್ನು ವಿಶಿಷ್ಟ ಜನಾಂಗೀಯ ಗುಂಪು ಎಂದು ಪರಿಗಣನೆ
ಯಾವ ರಾಜ್ಯಕ್ಕೆ ಎಷ್ಟು ಸ್ಥಾನ?
- ಇಂಗ್ಲೆಂಡ್ 533
- ಸ್ಕಾಟ್ಲೆಂಡ್ 59
- ವೇಲ್ಸ್ 40
- ಉತ್ತರ ಐರ್ಲೆಂಡ್ 18
- ಚುನಾವಣೆ ದಿನಾಂಕ ಮೇ 7
- ಒಟ್ಟು ಸ್ಥಾನಗಳು 650
- ಬಹುಮತಕ್ಕೆ ಗಡಿ 326