ಪಾಟ್ನ: ನಿತೀಶ್ ಕುಮಾರ್ ಮತ್ತು ಆರ್'ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಇಬ್ಬರು ಸೇರಿ ಇದೀಗ ಬಿಹಾರವನ್ನು ಪಾಕಿಸ್ತಾನವನ್ನಾಗಿಸಬೇಕಿಂದಿದ್ದಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಭಾನುವಾರ ಆರೋಪಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ನಿತೀಶ್ ಕುಮಾರ್ ಹಾಗೂ ಲಾಲೂ ಪ್ರಸಾದ್ ಯಾದವ್ ಅವರಿಗೆ ದೆವ್ವ ಹಿಡಿದಿದ್ದು, ಇದೀಗ ಬಿಹಾರವನ್ನು ಪಾಕಿಸ್ತಾನವಾಗಿಸಲು ಹೊರಟಿದ್ದಾರೆಂದು ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬಿಹಾರದಲ್ಲಿ ಬಿಜೆಪಿ ಸೋತಿದ್ದೇ ಆದರೆ, ಪಟಾಕಿ ಪಾಕಿಸ್ತಾನದಲ್ಲಿ ಸಿಡಿಯುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಇದೀಗ ಗಿರಿರಾಜ್ ಸಿಂಗ್ ಅವರು ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ.