ನವದೆಹಲಿ: ಮುಸ್ಲಿಂಮರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಪ್ರಚಾರ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ ಎಂಬ ವಿಹೆಚ್'ಪಿ ಹೇಳಿಕೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದು ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಪಕ್ಷದ ನಾಯಕ ಪಿ.ಎಲ್. ಪುಣ್ಯ ಅವರು, ದೇಶವನ್ನು ಇಬ್ಬಾಗ ಮಾಡುವಂತಹ ಹೇಳಿಕೆಗಳನ್ನು ನೀಡುವುದು ವಿಶ್ವ ಹಿಂದು ಪರಿಷತ್ ಸಂಘಟನೆಗೆ ಅಭ್ಯಾಸವಾಗಿಬಿಟ್ಟಿದೆ. ಈ ರೀತಿಯ ವಿವಾದಿತ ಹೇಳಿಕೆ ನೀಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಇಂತಹ ಸಂಘಟನೆಗಳು ಪ್ರಯತ್ನ ನಡೆಸುತ್ತಿವೆ ಎಂದು ಹೇಳಿದ್ದಾರೆ.
ವಿಹೆಚ್'ಪಿ ಸಂಘಟನೆಗೆ ಪ್ರಶ್ನೆಯೊಂದರನ್ನು ಕೇಳಲು ಇಚ್ಛಿಸುತ್ತೇನೆ ಜನಸಂಖ್ಯೆ ನಿಯಂತ್ರಿಸಲು ಯಾವ ಮುಸ್ಲಿಂ ಸಂಘಟನೆ ವಿರೋಧ ವ್ಯಕ್ತಪಡಿಸಿದೆ ಎಂಬುದರ ಕುರಿತಂತೆ ಮೊದಲು ಮಾಹಿತಿ ಕೊಡಿ. ಮಕ್ಕಳು ಬೇಡ ಹಾಗೂ ಬೇಕು ಎಂದು ಕೊಳ್ಳುವುದು ಅವರವರ ವೈಯಕ್ತಿಕ ವಿಚಾರ. ಈ ರೀತಿಯ ಹೇಳಿಕೆ ನೀಡುವುದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ.
ದೇಶದಲ್ಲಿ ಜನಸಂಖ್ಯೆ ನಿಯಂತ್ರಿಸುವ ಸಲುವಾಗಿ ಹಲವು ಸಂಘಟನೆಗಳು ಶ್ರಮ ಪಡುತ್ತಿದೆ. ಆದರೆ, ಇಂತಹ ಕೆಲಸಕ್ಕೆ ಕೈ ಜೋಡಿಸಿ ಕೆಲಸ ಮಾಡುವುದನ್ನು ಬಿಟ್ಟು ಮುಸ್ಲಿಂ ಸಂಘಟನೆಗಳು ತಮ್ಮ ಸಮುದಾಯದ ಜನಸಂಖ್ಯೆಯನ್ನು ಹೆಚ್ಚಿಸುಕೊಳ್ಳುವತ್ತ ಗಮನ ಹರಿಸುತ್ತಿದ್ದು, ಈ ಕುರಿತಂತೆ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ವಿಹೆಚ್'ಪಿ ಭಾನುವಾರ ಹೇಳಿತ್ತು.