ದೇಶ

ನಾಸಿಕ್‌ ಕುಂಭಮೇಳದಲ್ಲಿ ಎರಡನೇ ಪವಿತ್ರ ಶಾಹಿ ಸ್ನಾನ ಆರಂಭ

Srinivasamurthy VN

ನಾಸಿಕ್; ನಾಸಿಕ್ ಮತ್ತು ತ್ರಯಂಬಕೇಶ್ವರದಲ್ಲಿ ಭಾನುವಾ ಎರಡನೇ ಪವಿತ್ರ ಶಾಹಿ ಸ್ನಾನ ಆರಂಭವಾಗಿದ್ದು, ಲಕ್ಷಾಂತರ ಭಕ್ತರು ಗೋದಾವರಿಯಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ.

ಪವಿತ್ನ ಶಾಹಿ ಸ್ನಾನಕ್ಕೆ ಈಗಾಗಲೇ ಸಾವಿರಾರು ಭಕ್ತರು, ಸಾಧು-ಸಂತರು ಕುಂಭ ಭೂಮಿ ನಾಸಿಕ್ ಮತ್ತು ತ್ರಯಂಬಕೇಶ್ವರಕ್ಕೆ ಆಗಮಿಸಿದ್ದು, 25 ಲಕ್ಷಕ್ಕೂ ಹೆಚ್ಚು ಭಕ್ತರು ಪುಣ್ಯ ಸ್ನಾನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗೋದಾವರಿ ನದಿ ದಂಡೆಯಲ್ಲಿ ಲಕ್ಷಾಂತರ ಭಕ್ತರು ಸೇರಿರುವುದರಿಂದ ಈಗಾಗಲೇ ಸ್ಥಳದಲ್ಲಿ ಸಾಕಷ್ಟು ಭದ್ರತೆ ಕೈ ಗೊಂಡಿರುವ ಸ್ಥಳೀಯ ಅಧಿಕಾರಿಗಳು ನಗರಗಳಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಿದ್ದಾರೆ.

SCROLL FOR NEXT