ನ್ಯೂಯಾರ್ಕ್: ``ನರೇಂದ್ರ ಮೋದಿ ಅವರು ಸ್ವಾತಂತ್ರ್ಯಾ ನಂತರದ ಭಾರತಕ್ಕೆ ಸಿಕ್ಕಿದ ಒಬ್ಬ ಉತ್ತಮ ನಾಯಕ''. ಹೀಗೆಂದು ಬಣ್ಣಿಸಿದ್ದು ಬೇರಾರೂ ಅಲ್ಲ. ಮಾಧ್ಯಮ ದೊರೆ ರುಪರ್ಟ್ ಮರ್ಡೋಕ್.
ಅಮೆರಿಕದಲ್ಲಿ ಪ್ರಧಾನಿ ಮೋದಿ ಜತೆ ಮಾತುಕತೆ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಮೋದಿ ಅವರೊಂದಿಗೆ ಒಳ್ಳೆಯ ಕ್ಷಣಗಳನ್ನು ಕಳೆದಿದ್ದೇನೆ. ಅವರೊಬ್ಬ ಉತ್ತಮ ನಾಯಕ. ಆದರೆ, ಅವರಿಗೆ ಸಂಕೀರ್ಣ ಭಾರತದಲ್ಲಿ ಸಾಧಿಸಬೇಕಾದ್ದು ಬಹಳಷ್ಟಿದೆ ಎಂದರು. ಮೋದಿ ಮತ್ತು ಮುರ್ಡೋಕ್, ಭಾರತದ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಪಾತ್ರವೇನು ಎಂಬ ಬಗ್ಗೆ ಚರ್ಚಿಸಿದರು.