ಮನಮೋಹನ್ ಸಿಂಗ್ 
ದೇಶ

ಪ್ರಧಾನಿ ಮೋದಿ ಸತ್ಯ ಮಾತನಾಡುವುದಿಲ್ಲ: ಮನಮೋಹನ್ ಸಿಂಗ್

ಮೋದಿಯವರನ್ನು ಟೀಕೆ ಮಾಡುವುದಲ್ಲ. ತಾವು ಮಾತನಾಡುತ್ತಿರುವುದು ಸತ್ಯವಲ್ಲ ಎಂಬುದು ಅವರಿಗೇ ತಿಳಿದಿದೆ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು...

ದಿಸ್ಪುರ್: ಮೋದಿಯವರನ್ನು ಟೀಕೆ ಮಾಡುವುದಲ್ಲ. ತಾವು ಮಾತನಾಡುತ್ತಿರುವುದು ಸತ್ಯವಲ್ಲ ಎಂಬುದು ಅವರಿಗೇ ತಿಳಿದಿದೆ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.

ಅಸ್ಸಾಂನ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿಯವರು ನೀಡಿದ್ದ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮೋದಿಯವರನ್ನು ಟೀಕಿಸಲು ನಾನು ಇಚ್ಛಿಸುವುದಿಲ್ಲ. ಅವರು ಏನನ್ನು ಹೇಳುತ್ತಿದ್ದಾರೋ ಅದು ಸತ್ಯವಲ್ಲ ಎಂಬುದು ಅವರಿಗೇ ತಿಳಿದಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಅಸ್ಸಾಂ ವಿಧಾನಸಭಾ ಚುನಾವಣೆ ಕುರಿತಂತೆ ಮಾತನಾಡಿರುವ ಅವರು, ಅಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಾಗಿ ವಿಶ್ವಾಸವಿದೆ. 15 ವರ್ಷಗಳಿಂದ ಉತ್ತಮವಾಗಿ ಕೆಲಸ ಮಾಡಿದ್ದ ಹಳೆಯ ಸರ್ಕಾರವನ್ನು ಜನರು ಆಯ್ಕೆ ಮಾಡುತ್ತಾರೆಂದು ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಅಸ್ಸಾಂನ ರಾಹಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮೋದಿಯವರು, ಕಳೆದ ಯುಪಿಎ ಅವಧಿಯ "ರಿಮೋಟ್ ಕಂಟ್ರೋಲ್" ಸರ್ಕಾರದಿಂದಾಗಿ ದೇಶ ಸಾಕಷ್ಟು ನಲುಗಿತ್ತು. ಆದೇ ಸ್ಥಿತಿ ಅಸ್ಸಾಂನಲ್ಲಿ ಮರುಕಳಿಸಲು ತಾವು ಬಿಡುವುದಿಲ್ಲ. ಮನಮೋಹನ್ ಸಿಂಗ್ ಅವರು  ನೀವು ಅಧಿಕಾರದಲ್ಲಿದ್ದಾಗ ನಡೆದ ಅವ್ಯವಹಾರಗಳೇ ಇಂದು ಹೆಚ್ಚೆಚ್ಚು ಮಾತನಾಡುತ್ತಿವೆ. ಡಾ.ಸಿಂಗ್ ಅವರು ಹೇಳಿದ್ದು ನಿಜ, ಅವರು ಅಧಿಕಾರದಲ್ಲಿದ್ದಾಗ ನಡೆದ ಅವ್ಯವಹಾರಗಳು ಇಂದಿಗೂ ಮಾತನಾಡುತ್ತಿವೆ ಎಂದು ಟೀಕಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ