ನವದೆಹಲಿ: ಐಪಿಎಲ್ ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರನ್ನು ಇಂಗ್ಲೆಂಡ್ ನಿಂದ ಗಡಿಪಾರು ಮಾಡುವ ಪ್ರಕ್ರಿಯೆ ಆರಂಭಗೊಂಡಿಲ್ಲ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಇಂದು ನಡೆದ ಸಂಸತ್ತು ಕಲಾಪದ ವೇಳೆ ಸ್ಪಷ್ಟನೆ ನೀಡಿರುವ ಅವರು, ಲಲಿತ್ ಮೋದಿ ಗಡಿಪಾರು ವಿಚಾರ ಕುರಿತಂತೆ ಸರ್ಕಾರ ಈ ವರೆಗೂ ಯಾವುದೇ ಮನವಿಗಳು ತಲುಪಿಲ್ಲ. ಒಂದು ವೇಳೆ ಮನವಿಗಳು ಬಂದರೆ, ಗಡಿಪಾರು ಕುರಿತಂತೆ ವಿದೇಶಾಂಗ ಸಚಿವಾಲಯ ಪ್ರಕ್ರಿಯೆಗಳನ್ನು ಆರಂಭಿಸುತ್ತದೆ ಎಂದು ಹೇಳಿದ್ದಾರೆ.
ಲಲಿತ್ ಮೋದಿ ಗಡಿಪಾರು ವಿಚಾರ ಕುರಿತಂತೆ ಭಾರತದ ಕಾನೂನು ಜಾರಿ ಸಂಸ್ಥೆಗಳಿಂದ ವಿದೇಶಾಂಗ ಸಚಿವಾಲಯಕ್ಕೆ ಮನವಿಗಳು ಬರಬೇಕು. ನಂತರವಷ್ಟೇ ಸಚಿವಾಲಯ ಪ್ರಕ್ರಿಯೆ ಆರಂಭಿಸಲು ಸಾಧ್ಯ. ಈ ವರೆಗೂ ಸಚಿವಾಲಯಕ್ಕೆ ಇಂತಹ ಯಾವುದೇ ಮನವಿಗಳು ಬಂದಿಲ್ಲ. ಒಂದು ವೇಳೆ ಮನವಿಗಳು ಬಂದರೆ ಗಡಿಪಾರು ಪ್ರಕ್ರಿಯೆನ್ನು ಆರಂಭಿಸುತ್ತದೆ ಎಂದು ಹೇಳಿದ್ದಾರೆ.