ನವದೆಹಲಿ: ವಿವಾದಿತ ಆಗಸ್ಟವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರ ಮತ್ತು ದಾಖಲೆಗಳನ್ನು ಸಂಸತ್ತಿನಲ್ಲಿ ಮೇ 4ರಂದು ಮಂಡಿಸುವುದಾಗಿ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಿಳಿಸಿದ್ದಾರೆ.
ಯಾರಾದರೂ ಈ ಒಪ್ಪಂದದಲ್ಲಿ ಲಂಚ ಪಡೆದಿದ್ದರೆ ನಮಗೆ ಸರಿಯಾದ ಸಾಕ್ಷಿ ಸಿಕ್ಕಿದರೆ ಅವರನ್ನು ಶಿಕ್ಷಿಸಲಾಗುವುದು. ಆದರೆ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪವನ್ನು ಸಾಬೀತುಪಡಿಸಬೇಕು.ಸಂಸತ್ತಿನಲ್ಲಿ ವಿವರ ಮಂಡಿಸುವುದರಿಂದ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಮಾಧ್ಯಮಗಳಿಗೆ ನೀಡುವುದಿಲ್ಲ ಎಂದರು.
2014ರವರೆಗೆ ಕಂಪೆನಿ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ? ಯುಪಿಎ ಸರ್ಕಾರ ಕಂಪೆನಿಯನ್ನು ಕಪ್ಪು ಪಟ್ಟಿಗೆ ಏಕೆ ಸೇರಿಸಲಿಲ್ಲ. ಕಾಂಗ್ರೆಸ್ ನವರೇ ಇದಕ್ಕೆ ಮೊದಲು ಉತ್ತರಿಸಲಿ, ನಮ್ಮ ಸರ್ಕಾರದ ಸಮಯದಲ್ಲಿ ನಾವು ಕಂಪೆನಿಗೆ ನಿಷೇಧ ಹೇರಿದ್ದೆವು ಎಂದು ಪರ್ರಿಕರ್ ಪ್ರಶ್ನಿಸಿದರು.