ಸಂಗ್ರಹ ಚಿತ್ರ 
ದೇಶ

ಸ್ವಾತಂತ್ರ್ಯ ಸಂಭ್ರಮಕ್ಕೆ ಅಡ್ಡಿ ಯತ್ನ: ಅಸ್ಸಾಂ ಮತ್ತು ಮಣಿಪುರದಲ್ಲಿ 7 ಸ್ಫೋಟ

70ನೇ ಸ್ವಾತಂತ್ರ್ಯ ದಿನ ಸಂಭ್ರಮಾಚರಣೆಗೆ ಅಡ್ಡಿ ಪಡಿಸುವ ಉದ್ದೇಶದಿಂದ ಉಗ್ರರು ಅಸ್ಸಾಂ ಮತ್ತು ಮಣಿಪುರದಲ್ಲಿ 7 ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಗುವಾಹತಿ: 70ನೇ ಸ್ವಾತಂತ್ರ್ಯ ದಿನ ಸಂಭ್ರಮಾಚರಣೆಗೆ ಅಡ್ಡಿ ಪಡಿಸುವ ಉದ್ದೇಶದಿಂದ ಉಗ್ರರು ಅಸ್ಸಾಂ ಮತ್ತು ಮಣಿಪುರದಲ್ಲಿ 7 ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಅಸ್ಸಾಂ ನ ಟಿನ್ಸುಕಿಯಾ, ಶಿವಸಾಗರ ಜಿಲ್ಲೆಯ ಐದು ಪ್ರದೇಶಗಳಲ್ಲಿ ಮತ್ತು ಮಣಿಪುರ ರಾಜಧಾನಿ ಇಂಫಾಲದ 2 ಕಡೆ ಸ್ಫೋಟ ನಡೆಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಉಲ್ಪಾ ಉಗ್ರರು  ಈ ಸ್ಫೋಟ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸ್ಫೋಟದಲ್ಲಿ ಈ ವರೆಗೂ ಸಾವು-ನೋವುಗಳಾದ ಕುರಿತು ಮಾಹಿತಿ ಲಭ್ಯವಾಗಿಲ್ಲ. ಕಳೆದ ವಾರವಷ್ಟೇ 12 ಉಗ್ರ  ಸಂಘಟನೆಗಳು ಭಾರತದ ಸ್ವಾತಂತ್ರ್ಯ ದಿನ ಸಂಭ್ರಮಾಚರಣೆಯನ್ನು ನಿಷೇಧಿಸುವಂತೆ ಕರೆ ನೀಡಿದ್ದರು.

ಇದಾದ ಬೆನ್ನಲ್ಲೇ ಅಂದರೆ ಕಳೆದ ಶುಕ್ರವಾರ ಉಲ್ಫಾ ಉಗ್ರರು ನಡೆಸಿದ ಸ್ಫೋಟದಿಂದಾಗಿ ಹಿಂದಿ ಮಾತನಾಡುವ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರು. ಈ ಪ್ರಕರಣ ಹಸಿರಾಗಿರುವ ಬೆನ್ನಲ್ಲೇ  ಮತ್ತೆ ಅಸ್ಸಾಂ ಮತ್ತು ಮಣಿಪುರದಲ್ಲಿ 7 ಸ್ಫೋಟಗಳು ಸಂಭವಿಸಿವೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT