ದೇಶ

ಉಲ್ಫಾ ಉಗ್ರರಿಂದ ಬಿಜೆಪಿ ನಾಯಕನ ಪುತ್ರನ ಅಪಹರಣ, 1 ಕೋಟಿಗೆ ಡಿಮ್ಯಾಂಡ್

Lingaraj Badiger
ಇಟಾನಗರ: ಅರುಣಾಚಲ ಪ್ರದೇಶದಲ್ಲಿ ನಿಷೇಧಿತ ಉಲ್ಫಾ(ಯೂನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್) ಉಗ್ರ ಸಂಘಟನೆಯ ಉಗ್ರರು ಬಿಜೆಪಿ ನಾಯಕರೊಬ್ಬರ ಮಗನನ್ನು ಅಪಹರಿಸಿ, ಐಎಸ್ಐಎಸ್ ಉಗ್ರರ ಮಾದರಿಯಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿ ಒಂದು ಕೋಟಿ ರುಪಾಯಿಗೆ ಬೇಡಿಕೆ ಇಟ್ಟಿದ್ದಾರೆ.
ಆಗಸ್ಟ್ 1ರಂದು ಬಿಜೆಪಿ ನಾಯಕ, ತಿನ್ಸುಕಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರತ್ನೆಸ್ವೆರ್ ಮೊರಾನ್ ಪುತ್ರ ಕುಲ‍್ ದೀಪ್ ಮೊರಾನ್ ನನ್ನು ಉಲ್ಫಾ ಉಗ್ರರು ಅಪಹರಿಸಿಕೊಂಡು ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕುಲ್ ದೀಪ್ ಮೊರಾನ್ ಹಸಿರು ಟೀ ಶರ್ಟ್ ಹಾಕಿಕೊಂಡಿದ್ದು, ಶಸ್ತ್ರಸಜ್ಜಿತ ಮುಸುಕುಧಾರಿಗಳಾದ ಐವರ ಸುತ್ತ ನಿಂತಿದ್ದು, ಮಂಡಿಯೂರಿ ಕುಳಿತು ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. 
ನಾನು ತುಂಬಾ ನಿಶ್ಯಕ್ತನಾಗಿದ್ದೇನೆ ಮತ್ತು ನನ್ನ ಆರೋಗ್ಯ ಕೂಡಾ ತುಂಬಾ ಹದಗೆಟ್ಟಿದೆ ಎಂದು ಕುಲ್ ದೀಪ್ ಹೇಳಿದ್ದಾನೆ. ಅಲ್ಲದೇ ತನ್ನ ಬಿಡುಗಡೆಗೆ ಸಹಾಯ ಮಾಡಬೇಕೆಂದು ಪೋಷಕರು ಮತ್ತು ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಅವರಲ್ಲಿ ಮನವಿ ಮಾಡಿಕೊಂಡಿರುವ ನಾಟಕೀಯ ದೃಶ್ಯ ವಿಡಿಯೋದಲ್ಲಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
SCROLL FOR NEXT