ರಕ್ಷಣಾ ಸಚಿವ ಮನೋಹರ್ ಪರ್ರಿಕರ್
ನವದೆಹಲಿ: ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳು ಸೋರಿಕೆಯಾಗಿವೆ ಎಂಬ ವರದಿಗಳು ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಮನೋಹರ್ ಪರ್ರಿಕರ್, ನೌಕಾಪಡೆ ಮುಖ್ಯಸ್ಥರಿಗೆ ಬಹಿರಂಗಗೊಂಡಿರುವ ವರದಿಯನ್ನು ವಿಶ್ಲೇಷಿಸುವಂತೆ ಹೇಳಿದ್ದಾರೆ.
ಈ ವರದಿ ಬಹಿರಂಗಗೊಂಡ ವಿಷಯ ನನಗೆ ಮಧ್ಯರಾತ್ರಿ 12 ಗಂಟೆಗೆ ಹೊತ್ತಿಗೆ ತಿಳಿದುಬಂತು. ಇದೊಂದು ಹ್ಯಾಕಿಂಗ್ ಕೇಸು. ಏನು ಸೋರಿಕೆಯಾಗಿದೆ ಎಂದು ಸರಿಯಾಗಿ ತಿಳಿಸುವಂತೆ ನೌಕಾಪಡೆ ಮುಖ್ಯಸ್ಥರಿಗೆ ಹೇಳಿದ್ದೇನೆ ಎಂದು ಪರ್ರಿಕರ್ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದರು.
ದಾಖಲೆಗಳ ಸಂಗ್ರಹವನ್ನು ಗುರುತಿಸಿ ಇನ್ನಷ್ಟೇ ಖಚಿತಪಡಿಸಬೇಕಿದೆ. ಜಲಾಂತರ್ಗಾಮಿಯ ದಾಖಲೆಗಳ ಸೋರಿಕೆ ಬಗ್ಗೆ ತಿಳಿದುಕೊಳ್ಳಬೇಕಿದೆ. ಆದರೂ ದಾಖಲೆಗಳು ಸಂಪೂರ್ಣ ಸೋರಿಕೆಯಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು.