ಪಾಕಿಗಳಿಂದ ಭಾರತೀಯ ಆದಾಯ ಸೇವಾ ವೆಬ್ಸೈಟ್ ಹ್ಯಾಕ್
ಶಂಕಿತ ಪಾಕಿಸ್ತಾನ ಮೂಲದ ಹ್ಯಾಕರ್ ಗಳು ಶನಿವಾರ ಆದಾಯ ತೆರಿಗೆ ಇಲಾಖೆಗೆ ಸಂಬಂಧಪಟ್ಟ ಭಾರತೀಯ ಆದಾಯ ಸೇವೆಯ ಅಧಿಕೃತ ವೆಬ್ಸೈಟ್'ನ್ನು ಹ್ಯಾಕ್ ಮಾಡಿದ್ದಾರೆಂದು ಹೇಳಲಾಗುತ್ತಿದೆ...
ನವದೆಹಲಿ: ಶಂಕಿತ ಪಾಕಿಸ್ತಾನ ಮೂಲದ ಹ್ಯಾಕರ್ ಗಳು ಶನಿವಾರ ಆದಾಯ ತೆರಿಗೆ ಇಲಾಖೆಗೆ ಸಂಬಂಧಪಟ್ಟ ಭಾರತೀಯ ಆದಾಯ ಸೇವೆಯ ಅಧಿಕೃತ ವೆಬ್ಸೈಟ್'ನ್ನು ಹ್ಯಾಕ್ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಭಾರತೀಯ ಆದಾಯ ತೆರಿಗೆ ಇಲಾಖೆಯ ಅಧಿಕೃತ http://www.irsofficersonline. gov.in ನ್ನು ಹ್ಯಾಕ್ ಮಾಡಲಾಗಿದ್ದು, ನಂತರ ಈ ವೆಬ್ ಸೈಟ್ ಯಾರಿಗೂ ಸಿಗದಂತೆ ಮಾಡಲಾಗಿದೆ.
ವೆಬ್ ಸೈಟ್ ಹ್ಯಾಕ್ ಮಾಡಿದ ನಂತರ ಈ ಬಗ್ಗೆ ಬರೆದುಕೊಂಡಿರುವ ಹ್ಯಾಕರ್ಸ್ ಗಳು, ಪಾಕಿಸ್ತಾನ ಜಿಂದಾಬಾದ್, ನಾವು ಪಾಕಿಸ್ತಾನದ ಸೈಬರ್ ಅಟಾಕ್ ಟೀಮ್. ಗೋ ಹೋಮ್ ಕಿಡ್ಡೋ ಇಂಡಿಯಾ ಕಿಂಡ್ಸ್ ಹ್ಯಾಕರ್ಸ್ ಆ್ಯಂಡ್ ಫೀಲ್ ದ ಪವರ್ ಆಫ್ ಪಾಕಿಸ್ತಾನ್ ( ಭಾರತೀಯ ಹ್ಯಾಕರ್ಸ್ ಮಕ್ಕಳೇ ಮನೆಗೆ ಹೋಗಿ, ಪಾಕಿಸ್ತಾನದ ಶಕ್ತಿ ಬಗ್ಗೆ ತಿಳಿಯಿರಿ ಎಂದು ಬರೆದುಕೊಂಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ವೆಬ್ ಸೈಟ್ ನಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯಾವುದೇ ವಿಷಯಗಳಿರಲಿಲ್ಲ ಎಂಬುದಕ್ಕೆ ಸಮಾಧಾನ ಪಟ್ಟಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರಸ್ತುತ ಹ್ಯಾಕ್ ಆಗಿರುವ ವೆಬ್ ಸೈಟ್ ಕೇಂದ್ರ ನೇರ ತೆರಿಗೆ ಮಂಡಳಿ ಮತ್ತು ಆದಾಯ ಇಲಾಖೆಯ ನಡುವಿನ ಅಧಿಕೃತ ಸಂವಹನಕ್ಕೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಈ ವೆಬ್ ಸೈಟ್ ಗೆ ಹೋದರೆ ವಿ ವಿಲ್ ಬಿ ಬ್ಯಾಕ್ ಸೂನ್! ಸಾರಿ ಫಾರ್ ದಿ ಇನ್ ಕನ್ವಿನಿಯನ್ಸ್. ಕೆಲವೊಂದು ಕಾರ್ಯನಿರ್ವಹಣೆಯಿಂದಾಗಿ ವೈಬ್ ಸೈಟ್ ಕಾರ್ಯನಿರ್ವಹಣೆಯಲ್ಲಿ ತೊಡಕುಂಟಾಗಿದೆ ಎಂದು ತೋರಿಸುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.