ನವದೆಹಲಿ: ಕೇಂದ್ರ ಸರ್ಕಾರದ ಎಲ್ಪಿಜಿ ಸಬ್ಸಿಡಿ ಸೇರಿದಂತೆ 3540 ಯೋಜನೆಗಳ ಎಲ್ಲ ನೇರ ನಗದು ವರ್ಗಾವಣೆ (ಡಿಬಿಟಿ) ಹೊಣೆ ಅಂಚೆ ಬ್ಯಾಂಕ್ (ಪೋಸ್ಟ್ ಬ್ಯಾಂಕ್) ನಿರ್ವಹಿಸುವ ಸಾಧ್ಯತೆ ಇದೆ.
ಇದರ ಜತೆಗೆ ಅಂಚೆ ಇಲಾಖೆ ವ್ಯಾಪ್ತಿಗೆ ಬರುವ ಸೇವಿಂಗ್ಸ್ ಬ್ಯಾಂಕ್ ಕೂಡ ಹೊಸ ಬ್ಯಾಂಕ್ ವ್ಯಾಪ್ತಿಗೆ ಬರಲಿದೆ. ಅಂಚೆ ಇಲಾಖೆಯೇ ಹೊಸ ಬ್ಯಾಂಕಿಂಗ್ ವ್ಯವಸ್ಥೆಯ ಉಸ್ತುವಾರಿ ನಿರ್ವಹಿಸಲಿದೆ. ``ಈ ಹಿಂದೆ ಪೋಸ್ಟ್ ಬ್ಯಾಂಕ್ ಸ್ಥಾಪನೆಗೆ ರು.300 ಕೋಟಿ ನಿಗದಿ ಮಾಡಲಾಗಿತ್ತು. ಈಗ ರು.800 ಕೋಟಿಗೆ ಏರಿಸಲಾಗಿದೆ. ನೇರ ನಗದು ವರ್ಗಾವಣೆ ಯೋಜನೆ, ಸದ್ಯ ಅಂಚೆ ಇಲಾಖೆ ನಿರ್ವಹಿಸುತ್ತಿರುವ ಸೇವಿಂಗ್ಸ್ ಬ್ಯಾಂಕ್ ಖಾತೆಗಳನ್ನೂ ಕೂಡ ಅಂಚೆ ಬ್ಯಾಂಕ್ ವ್ಯಾಪ್ತಿಗೆ ತರುವ ಪ್ರಸ್ತಾಪ ಇದೆ''ಎನ್ನಲಾಗಿದೆ.
ಈ ಬಗ್ಗೆ ಜ.15ರಂದು ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಸಭೆ ನಡೆಯಲಿದೆ. ಅದರಲ್ಲಿ ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದಾದ ಬಳಿಕ ಅದನ್ನು ಹಣಕಾಸು ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟಕ್ಕೆ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ.
ಮುಂದಿನ ವರ್ಷದಿಂದ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ಈಗಾಗಲೇ ಬ್ಯಾಂಕ್ ಆರಂಭಿಸುವ ಬಗ್ಗೆ ಒಪ್ಪಿಗೆ ಸೂಚಿಸಿದೆ. 2017ರ ಮಾ.7ರ ಬಳಿಕ ಅಂಚೆ ಇಲಾಖೆಯಲ್ಲಿ ಪೂರ್ಣ ಪ್ರಮಾಣದ ಬ್ಯಾಂಕ್ ಕಾರ್ಯಾರಂಭಿಸಲಿದೆ.
20 ಲಕ್ಷ ಖಾತೆಗಳು: ಅಂಚೆ ಇಲಾಖೆ 2015ರ ಮಾರ್ಚ್ ಅಂತ್ಯಕ್ಕೆ ಅನ್ವಯವಾಗುವಂತೆ 20 ಲಕ್ಷ ಉಳಿತಾಯ ಖಾತೆಗಳನ್ನು ಹೊಂದಿದೆ. ಜತೆಗೆ ರು.47,800 ಕೋಟಿ ಠೇವಣಿ ಹೊಂದಿದೆ. ಕಳೆದ ತಿಂಗಳ 27ರ ಅಂತ್ಯಕ್ಕೆ ರು.40 ಸಾವಿರ ಕೋಟಿ ವಿವಿಧ ಯೋಜನೆಗಳ ಸಬ್ಸಿಡಿ ವಿವಿಧ ಯೋಜನೆಗಳ ಸಬ್ಸಿಡಿ ವಿವಿಧ ಯೋಜನೆಗಳ ಫಲಾನುಭವಿಗಳನ್ನು ತಲುಪುತ್ತಿವೆ.