ಲಂಡನ್: 2008ರಲ್ಲಿ ನಡೆದಿದ್ದ ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣದಲ್ಲಿ ತಾಜ್ ಹೊಟೆಲ್ ನಲ್ಲಿ ಗಾಯಗೊಂಡಿದ್ದ ಬ್ರಿಟೀಷ್ ಪ್ರಜೆಯೊಬ್ಬ ಸತತ 7 ವರ್ಷಗಳ ನಂತರ ಪರಿಹಾರ ಧನ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.
26/11 ಮುಂಬೈ ದಾಳಿ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬ್ರಿಟೀಷ್ ಪ್ರಜೆ ವಿಲ್ ಪೈಕ್ ತಾಜ್ ಹೊಟೆಲ್ ಆಡಳಿತ ಮಂಡಳಿಯಿಂದ ಪರಿಹಾರ ಪಡೆದವನಾಗಿದ್ದಾನೆ. ಮುಂಬೈ ದಾಳಿ ಪ್ರಕರಣ ಸಂಬಂಧ ಖಾಸಗಿ ಸಂಸ್ಥೆ ತಾಜ್ ಹೊಟೆಲ್ ನಿಂದ ಪರಿಹಾರ ಪಡೆದವರ ಪೈಕಿ ವಿಲ್ ಪೈಕ್ ಮೊದಲಿಗನಾಗಿದ್ದಾನೆ.
ಏಳು ವಷ೯ಗಳ ಹಿ೦ದೆ ನಡೆದಿದ್ದ ಮು೦ಬೈ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ವಿಲ್ ಪ್ಯೆಕ್ ಎ೦ಬ ಪರಿಹಾರ ಕೋರಿ ಲ೦ಡನ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಉಗ್ರರ ದಾಳಿಗೆ ತುತ್ತಾಗಿದ್ದ ತಾಜ್ ಮಹಲ್ ಪ್ಯಾಲೇಸ್ ಹೊಟೆಲ್ ನಲ್ಲಿ, ಅತಿಥಿಗಳಿಗೆ ಸಮಪ೯ಕ ಭದ್ರತೆ ಒದಗಿಸಿರಲಿಲ್ಲ. ಹೀಗಾಗಿಯೇ ದಾಳಿ ನಡೆಯಿತು ಎ೦ದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಸತತ ವಿಚಾರಣೆ ನಡೆಸಿದ ಲಂಡನ್ ನ್ಯಾಯಾಲಯ ಇದೀಗ ವಿಲ್ ಪೈಕ್ ಪರ ತೀರ್ಪು ನೀಡಿದ್ದು, ಆತನಿಗೆ ಪರಿಹಾರ ಧನ ನೀಡುವಂತೆ ತಾಜ್ ಹೊಟೆಲ್ ಗೆ ಸೂಚಿಸಿದೆ. ಆದರೆ ನ್ಯಾಯಾಲಯ ಸೂಚಿಸಿರುವ ಪರಿಹಾರ ಮೊತ್ತ ಎಷ್ಟು ಎ೦ಬುದು ಬಹಿರ೦ಗಗೊ೦ಡಿಲ್ಲ.
ಜಾಹೀರಾತು ಕ೦ಪನಿಯೊ೦ದರಲ್ಲಿ ಕೆಲಸ ಮಾಡುತ್ತಿದ್ದ ಪಿಲ್ ಹಾಗೂ ಆತನ ಗೆಳತಿ ಕೆಲ್ಲಿ ಮು೦ಬ್ಯೆನ ತಾಜ್ ಹೊಟೆಲ್‍ನಲ್ಲಿ ತ೦ಗಿದ್ದಾಗ ಉಗ್ರರ ದಾಳಿ ನಡೆದಿತ್ತು. ಉಗ್ರರಿ೦ದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಪಿಲ್ ಸುಮಾರು 50 ಅಡಿಗಳ ಎತ್ತರದ ಮಹಡಿಯಿ೦ದ ನೆಲಕ್ಕೆ ಬಿದ್ದಿದ್ದ. ಇದರಿ೦ದ ಆತ ಪಾಶ್ವ೯ವಾಯುಗೆ ತುತ್ತಾಗಿದ್ದರು.