ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೆ ಇಸ್ಲಾಂ ಧರ್ಮ ಪ್ರಚಾರಕ ಜಾಕೀರ್ ನಾಯಕ್'ನನ್ನು ಶಿವಸೇನೆ ಸೋಮವಾರ ಹೋಲಿಕೆ ಮಾಡಿದೆ.
ಈ ಕುರಿತಂತೆ ಮಾತನಾಡಿರುವ ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರು, ದೇಶದಲ್ಲಿ ಹುಟ್ಟಿಕೊಂಡಿರುವ ಚಿಕ್ಕಚಿಕ್ಕ ಭೂಗತ ಪಾತಕಿ ದಾವೂದ್ ಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.
ಜಾಕೀರ್ ನಾಯಕ್ ಯಾರು? ಸರ್ಕಾರಕ್ಕೆ ನಿಜಕ್ಕೂ ಧೈರ್ಯವಿದ್ದರೆ, ದೇಶದಲ್ಲಿ ಚಿಕ್ಕ ಪಾಕಿಸ್ತಾನವನ್ನು ನಿರ್ಮಾಣ ಮಾಡುವ ಯತ್ನ ನಡೆಸುತ್ತಿರುವ ಇಂತಹ ಚಿಕ್ಕ ಚಿಕ್ಕ ದಾವೂದ್ ಗಳ ವಿರುದ್ಧ ಕ್ರಮಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.