ನವದೆಹಲಿ: ಯೋಗಕ್ಷೇಮ ಕಾಪಾಡಿಕೊಳ್ಳುವ ಸಲುವಾಗಿ ಯೋಗ ಮಾಡಬೇಕಿದ್ದು, ಯೋಗ ದಿನವಾದರೂ ರಾಜಕೀಯ ಮಾಡುವುದನ್ನು ವಿರೋಧ ಪಕ್ಷಗಳು ಪಕ್ಕಕ್ಕಿಡಬೇಕೆಂದು ಭಾರತೀಯ ಜನತಾ ಪಕ್ಷ ಮಂಗಳವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರು, ನಾವು ನಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕಿದ್ದು, ಯೋಗ ದಿನವಾದ ಇಂದು ನಾವು ನಮ್ಮ ರಾಜಕೀಯವನ್ನು ಪಕ್ಕಕ್ಕಿಡಬೇಕು ಎಂದಿದ್ದಾರೆ.
ಯೋಗ ಮಾಡುವುದನ್ನು ತಿರಸ್ಕರಿಸುವ ಮೂಲಕ ಯೋಗಾಭ್ಯಾಸವನ್ನು ರಾಜಕೀಯ ವಿಷಯ ಮಾಡಬಾರದು, ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಯೋಗ ಮಾಡಬೇಕೆಂದು. ಯೋಗ ದಿನವೆಂಬುದು ಹೆಮ್ಮೆಯ ವಿಚಾರ. ಉತ್ಸಾಹ ಹಾಗೂ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.