ಮುಂಬೈ: ನಾನು ಭಾರತ್ ಮಾತಾ ಜಿ ಜೈ ಎಂದು ಘೋಷಣೆ ಕೂಗಲ್ಲ ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಸೋಮವಾರ ಹೇಳಿದ್ದಾರೆ.
ಆರ್ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗತ್ ಅವರು, ಹೊಸ ತಲೆಮಾರು ಮದರ್ ಇಂಡಿಯಾ ಎಂದು ಒಟ್ಟಾಗಿ ಘೋಷಣೆ ಕೂಗುವ ಅಗತ್ಯ ಇದೆ ಎಂದು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಲಾತೂರ್ ಜಿಲ್ಲೆಯ ಉದ್ಗಿರ್ ತೆಹ್ಸಿಲ್ ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಓವೈಸಿ, 'ನಾನು ಆ ಘೋಷಣೆ ಕೂಗಲ್ಲ ಅಂದ್ರೆ ನೀವು ಏನ್ ಮಾಡುತ್ತೀರಿ ಭಾಗವತ್ ಸಾಹೇಬ್' ಎಂದು ಪ್ರಶ್ನಿಸಿದ್ದಾರೆ.
'ನೀವು ನನ್ನ ಕುತ್ತಿಗೆಯ ಮೇಲೆ ಕತ್ತಿ ಹಿಡಿದು ಆ ಘೋಷಣೆ ಕೂಗು ಅಂದರೂ ನಾನು ಕೂಗಲ್ಲ. ಭಾರತ್ ಮಾತಾ ಕಿ ಜೈ ಎಂದು ಕೂಗುವಂತೆ ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ' ಎಂದು ಓವೈಸಿ ಹೇಳಿದ್ದಾರೆ.
ಕಳೆದ ಮಾರ್ಚ್ 3ರಂದು ಜೆಎನ್ ಯು ರಾಷ್ಟ್ರ ವಿರೋಧ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ್ದ ಭಾಗವತ್, ಹೊಸ ತಲೆಮಾರಿನ ಯುವಕರು ಮದರ್ ಇಂಡಿಯಾ ಘೋಷಣೆ ಕೂಗುವ ಬಗ್ಗೆ ಚಿಂತನೆ ನಡೆಸಬೇಕು ಎಂದಿದ್ದರು.