ಮೂರು ದೇಶಗಳ ಸಂಪರ್ಕ ಬೆಸೆಯಲಿರುವ ಅಂತಾರಾಷ್ಟ್ರೀಯ ಹೈವೇ (ಸಂಗ್ರಹ ಚಿತ್ರ) 
ದೇಶ

ಭಾರತ, ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ದೇಶಗಳ ಬೆಸೆಯಲಿರುವ 1400 ಕಿ.ಮೀ ರಸ್ತೆ

ಬಹು ನಿರೀಕ್ಷಿತ ಭಾರತ, ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ದೇಶಗಳ ನಡುವೆ ಸಂಪರ್ಕ ಬೆಸೆಯಲಿರುವ ಸುಮಾರು 1400 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದ್ದು, ಕೇವಲ 18 ತಿಂಗಳಲ್ಲಿ ಈ ಬೃಹತ್ ಹೈವೇ ಮೂರು ದೇಶಗಳನ್ನು ಸಂಪರ್ಕಿಸಲಿದೆ...

ನವದೆಹಲಿ: ಬಹು ನಿರೀಕ್ಷಿತ ಭಾರತ, ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ದೇಶಗಳ ನಡುವೆ ಸಂಪರ್ಕ ಬೆಸೆಯಲಿರುವ ಸುಮಾರು 1400 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಅಂತಿಮ ಹಂತ  ತಲುಪಿದ್ದು, ಕೇವಲ 18 ತಿಂಗಳಲ್ಲಿ ಈ ಬೃಹತ್ ಹೈವೇ ಮೂರು ದೇಶಗಳನ್ನು ಸಂಪರ್ಕಿಸಲಿದೆ.

ಮೂಲಗಳ ಪ್ರಕಾರ ಮೂರು ದೇಶಗಳ ಬಹುಉದ್ದೇಶಿತ ಈ ತ್ರಿಪಕ್ಷೀಯ ಯೋಜನೆಯ ಕಾಮಗಾರಿ ಈಗಾಗಲೇ ಅಂತಿಮ ಹಂತ ತಲುಪಿದ್ದು, ಇನ್ನು ಕೇವಲ 18 ತಿಂಗಳ ಒಳಗಾಗಿ  ಮರುನಿರ್ಮಾಣ ಕಾರ್ಯ ಮುಗಿಯಲಿದೆ. ಇದಕ್ಕೆ ಭಾರತ ಹಣಕಾಸಿನ ನೆರವು ನೀಡಿದೆ ಎಂದು ಥಾಯ್ಲೆಂಡ್‌ನ ಭಾರತೀಯ ರಾಯಭಾರಿ ಭಾಗ್ವತ್ ಸಿಂಗ್ ಬಿಶ್ನೋಯ್ ತಿಳಿಸಿದ್ದಾರೆ.

ಮೂರು ದೇಶಗಳನ್ನು ಸಂಪರ್ಕಿಸುವ ಈ ರಸ್ತೆ, ವ್ಯಾಪಾರ ವಹಿವಾಟಿನಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಮೂರೂ ದೇಶಗಳ ನಡುವಿನ ವಾಣಿಜ್ಯ, ಸಂಸ್ಕೃತಿ, ಸಂಪ್ರದಾಯ ಮತ್ತು ಭಾಷಾ  ಸೊಗಡಿನ ವಿನಿಮಯಕ್ಕೂ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಪ್ರವಾಸೋಧ್ಯಮ ದೃಷ್ಟಿಯಿಂದಾಗಿ ಈ ಯೋಜನೆ ಪ್ರಾಮುಖ್ಯತೆ ಪಡೆದಿದ್ದು, ಕಳೆದ ವರ್ಷ  ಭಾರತದಿಂದ ಥಾಯ್ಲೆಂಡ್‌ಗೆ 10 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದರು. ಹೀಗಾಗಿ ಪ್ರವಾಸೋದ್ಯಮ ದೃಷ್ಟಿಯಿಂದಲೂ ಈ ಯೋಜನೆ ಮಹತ್ವ ಪಡೆದಿದೆ.

ಕಳೆದ ವರ್ಷ ಭಾರತ ಮತ್ತು ಥಾಯ್ಲೆಂಡ್ ನಡುವೆ 8 ಬಿಲಿಯನ್ ಡಾಲರ್ ವ್ಯಾಪಾರ ವಹಿವಾಟು ನಡೆದಿತ್ತು. ಮ್ಯಾನ್ಮಾರ್-ದಾವಿ ಬಂದರು ಮತ್ತು ಥಾಯ್ಲೆಂಡ್ ಗಡಿ ಭಾಗದಲ್ಲಿರುವ ಥಾಯ್ಲೆಂಡ್  ಇಂಡಸ್ಟ್ರಿಯಲ್ ಎಸ್ಟೇಟ್ ಯೋಜನೆಯಿಂದ ಭಾರತ ಮತ್ತು ಆಗ್ನೇಯ ರಾಷ್ಟ್ರಗಳ ನಡುವಿನ ಸಂಬಂಧ ಇನ್ನಷ್ಟು ವೃದ್ಧಿಸಲಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ