ದೇಶ

83 ತೇಜಸ್ ಯುದ್ಧ ವಿಮಾನ, 15 ಹೆಲಿಕಾಪ್ಟರ್ ಗಳು, 464 ಯುದ್ಧ ಟ್ಯಾಂಕ್ ಗಳು ಭಾರತದಲ್ಲಿ ನಿರ್ಮಾಣ!

Srinivasamurthy VN

ನವದೆಹಲಿ: ಯುದ್ಧ ಪರಿಕರಗಳನ್ನು ಭಾರತದಲ್ಲೇ ನಿರ್ಮಾಣ ಮಾಡಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ 83 ತೇಜಸ್ ಯುದ್ಧ ವಿಮಾನ, 15 ಹೆಲಿಕಾಪ್ಟರ್ ಗಳು ಮತ್ತು 464 ಯುದ್ಧ ಟ್ಯಾಂಕ್ ಗಳನ್ನು  ಭಾರತದಲ್ಲೇ ನಿರ್ಮಿಸುವ ಮಹತ್ವದ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ಸಂಸ್ಥೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವಕ ಕ್ರಮಗಳನ್ನು ಕೈಗೊಂಡಿದ್ದು, ಇದೇ ಕಾರಣಕ್ಕೆ ಇಲ್ಲೇ 83 ತೇಜಸ್ ಯುದ್ಧ ವಿಮಾನ, 15  ಹೆಲಿಕಾಪ್ಟರ್ ಗಳು ಮತ್ತು 464 ಟಿ-90ಯುದ್ಧ ಟ್ಯಾಂಕ್ ಗಳನ್ನು ನಿರ್ಮಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಹೆಚ್ ಎಎಲ್ ಈಗಾಗಲೇ 40 ವಿಮಾನಗಳನ್ನು ನಿರ್ಮಾಣ ಮಾಡುತ್ತಿದ್ದು ಇದೇ ವರ್ಷಾಂತ್ಯದಲ್ಲಿ ಇವುಗಳ ನಿರ್ಮಾಣ  ಕಾರ್ಯ ಪೂರ್ಣಗೊಳ್ಳಲಿದೆ. ಇದರ ಜೊತೆಗೇ ಮತ್ತಷ್ಟು ಯುದ್ಧ ವಿಮಾನಗಳನ್ನು ನಿರ್ಮಾಣ ಮಾಡುವ ಹೊಣೆಯನ್ನು ಹೆಚ್ ಎಎಲ್ ಗೆ ನೀಡಲಾಗುತ್ತಿದೆ.

ಇಂದಿನ ಹೊಸ ಒಪ್ಪಂದದಂತೆ ಹೆಚ್ ಎಎಲ್ ಒಟ್ಟು 50 ಸಾವಿರ ಕೋಟಿ ಮೌಲ್ಯದ ಯುದ್ಧ ವಿಮಾನಗಳನ್ನು ನಿರ್ಮಾಣತ್ತಿದ್ದು, ಉಳಿದಂತೆ ಭಾರತೀಯ ಸೇನೆ ಹಾಗೂ ವಾಯುಸೇನೆಗಳ ವತಿಯಿಂದ 2, 911 ಕೋಟಿ ವೆಚ್ಚದಲ್ಲಿ  ಹೆಲಿಕಾಪ್ಟರ್ ಗಳು ನಿರ್ಮಾಣವಾಗುತ್ತಿವೆ. ಇನ್ನು 13, 448 ಕೋಟಿ ಮೌಲ್ಯದ ಯುದ್ಧ ಟ್ಯಾಂಕ್ ಗಳನ್ನು ಕೂಡ ಇಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.ಇದಲ್ಲದೆ 598 ಚಾಲಕ ರಹಿತ ಯುದ್ಧ ವಿಮಾನ ಡ್ರೋಣ್  ಗಳನ್ನು ಕೂಡ ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ಸಂಸ್ಥೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವಕ ಕ್ರಮಗಳನ್ನು ಕೈಗೊಂಡಿದ್ದು, ಪ್ರಸ್ತುತ ಹೆಚ್ ಎಎಲ್ ವಾರ್ಷಿಕ 8 ವಿಮಾನಗಳನ್ನು ತಯಾರಿಸುವ  ಸಾಮರ್ಥ್ಯವನ್ನು ಹೊಂದಿದ್ದು, ಇದನ್ನು 16ಕ್ಕೇರಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT