ಬಾರ್ಮರ್ ನಲ್ಲಿ ಪತನವಾದ ಮಿಗ್ 21 ತರಬೇತಿ ವಿಮಾನ (ಎಎನ್ ಐ ಚಿತ್ರ) 
ದೇಶ

ಮತ್ತೊಂದು ಮಿಗ್ ಅಪಘಾತ; ರಾಜಸ್ತಾನದಲ್ಲಿ ಯುದ್ಧ ವಿಮಾನ ಪತನ; ಪೈಲಟ್ ಗಳು ಪಾರು

ಭಾರತೀಯ ಸೇನೆಗೆ ಸೇರಿದ ಮಿಗ್ 21 ಯುದ್ಧ ವಿಮಾನವೊಂದು ರಾಜಸ್ತಾನದಲ್ಲಿ ಪತನವಾಗಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಾರ್ಮರ್: ಭಾರತೀಯ ಸೇನೆಗೆ ಸೇರಿದ ಮಿಗ್ 21 ಯುದ್ಧ ವಿಮಾನವೊಂದು ರಾಜಸ್ತಾನದಲ್ಲಿ ಪತನವಾಗಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ  ಪಾರಾಗಿದ್ದಾರೆ.

ರಾಜಸ್ತಾನದ ಬಾರ್ಮರ್ ನಲ್ಲಿ ತಾಂತ್ರಿಕ ದೋಷದಿಂದ ಮಿಗ್ 21 ವಿಮಾನ ಪತನವಾಗಿದ್ದು, ಬಾರ್ಮರ್ ಸಮೀಪದ ಉತ್ತರ್ ಲಾಯ್ ಸೇನಾ ನೆಲೆ ಸಮೀಪದಲ್ಲೇ ವಿಮಾನ ಪತನವಾಗಿದೆ.  ಪ್ರಾಥಮಿಕ ಮಾಹಿತಗಳ ಪ್ರಕಾರ ವಿಮಾನ ಪತನದಿಂದಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸೇನಾ ವಕ್ತಾರರು, ಬಾರ್ಮರ್ ಸಮೀಪದ ಉತ್ತರ್ ಲಾಯ್ ವಾಯುಸೇನಾ ನೆಲೆಯಿಂದ ಇಂದು ಮಧ್ಯಾಹ್ನ ಟೇಕ್ ಆಫ್ ಆಗಿದ್ದ,  ಟಿ-69 ತರಬೇತಿ  ವಿಮಾನ ಟೇಕ್ ಆಫ್ ಕೆಲವೇ ಕ್ಷಣಗಳಲ್ಲಿ ಪತನವಾಗಿ ಮಲಿಯೋಕಿ ಧನಿ ಸಮೀಪದ ಮೈದಾನದಲ್ಲಿ ಬಿದ್ದಿದೆ. ಇಬ್ಬರೂ ಪೈಲಟ್ ಗಳು ವಿಮಾನ ಪತನವಾಗುವ ಮುನ್ಸೂಚನೆ  ತಿಳಿಯುತ್ತಿದ್ದಂತೆಯೇ ಪ್ಯಾರಾಚೂಟ್ ಮೂಲಕ ವಿಮಾನದಿಂದ ಜಿಗಿದಿದ್ದಾರೆ. ಹೀಗಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಪ್ರಸ್ತುತ ವಿಮಾನ ಅಪಘಾತ ಸಂಬಂಧ ವಾಯುಸೇನಾ ನೆಲೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT