ಸಮಾಜವಾದಿ ಪಕ್ಷದ ನಾಯಕ ಅಜಂಖಾನ್
ಲಖನೌ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರಿಂದಾಗಿ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರು ಬೇಜಾವಾಬ್ದಾರಿತನದ ಹೇಳಿಕೆಯನ್ನು ನೀಡುತ್ತಿದ್ದಾರೆಂದು ಬಿಜೆಪಿ ಸೋಮವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಎಸ್.ಪ್ರಕಾಶ್ ಅವರು, ಅಜಂಖಾನ್ ಅವರು ಉತ್ತರಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ವಿಚಾರವನ್ನು ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ಮತ್ತೆ ಸುದ್ದಿಗೆ ಬರಲು ಹಾಗೂ ರಾಜ್ಯ ರಾಜಕೀಯಲ್ಲಿ ಸಕ್ರಿಯರಾಗಲು ಬೇಜಾವಾಬ್ದಾರಿತನದ ಹೇಳಿಕೆಯನ್ನು ನೀಡುತ್ತಿದ್ದಾರೆಂದು ಹೇಳಿದ್ದಾರೆ.
ಅಜಂಖಾನ್ ಅವರು ಜನರು ಕೊಟ್ಟಿರುವ ಸಂದೇಶವನ್ನು ತೆಗೆದುಕೊಂಡು ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ನಡೆದುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಇದರಂತೆ ಮತ್ತೊಬ್ಬ ಬಿಜೆಪಿ ನಾಯಕ ಮನೋಜ್ ಮಿಶ್ರಾ ಅವರೂ ಕೂಡ ಅಜಂಖಾನ್ ವಿರುದ್ಧ ಕಿಡಿಕಾರಿದ್ದು, ಇಡೀ ಇತ್ತರಪ್ರದೇಶದ ಜನತೆಗೆ ಅಜಂಖಾನ್ ಅವರು ನಾಟಕದ ವ್ಯಕ್ತಿ ಎಂಬುದು ಗೊತ್ತಿದೆ. ಅನಗತ್ಯವಾಗಿ ವಿಚಾರ ಮಾಡುತ್ತಿರುವ ಅಜಂಖಾನ್, ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ವಿಚಾರ ಸಂಬಂಧ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆಂದು ಹೇಳಿದ್ದಾರೆ.
ಗೋವರ್ಧನ ಮಠದ ಶಂಕರಾಚಾರ್ಯ ಪೀಠದ ಸ್ವಾಮಿ ಅಧೋಕ್ಷಜಾನಂದ ಮಹಾರಾಜ್ ಅವರು ದಾನವಾಗಿ ನೀಡಿದ್ದ ಹಸುವನ್ನು ಸಮಾಜವಾದಿ ನಾಯಕ ಅಜಂಖಾನ್ ಅವರು ಶ್ರೀಗಳಿಗೆ ನಿನ್ನೆಯಷ್ಟೇ ವಾಪಸ್ ನೀಡಿದ್ದರು.
ಶ್ರೀಗಳಿಗೆ ಪತ್ರ ಬರೆದಿದ್ದ ಅಜಂಖಾನ್ ದೇಶದಲ್ಲಿಂದು ಮುಸ್ಲಿಮರು ಅಸುರಕ್ಷಿತ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ನನಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಬಸಿ ಬಳಿಯುವ ಸಲುವಾಗಿ ಗೋರಕ್ಷಕರೇ ಹಸುವನ್ನು ಹತ್ಯೆ ಮಾಡಲು ಯತ್ನಿಸಬಹುದೆಂದು ಹೇಳಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics