ಯೋಗಿ ಆದಿತ್ಯನಾಥ್ 
ದೇಶ

ತ್ರಿವಳಿ ತಲಾಖ್ ಕುರಿತು ಮೌನ: ದ್ರೌಪದಿ ವಸ್ತ್ರಾಪಹರಣದ ಸನ್ನಿವೇಶಕ್ಕೆ ಯೋಗಿ ಆದಿತ್ಯನಾಥ್ ಹೋಲಿಕೆ

ರಾಷ್ಟ್ರಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ತ್ರಿವಳಿ ತಲಾಖ್ ಸಂಬಂಧ ಪಟ್ಟಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್...

ಲಕ್ನೋ: ರಾಷ್ಟ್ರಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ತ್ರಿವಳಿ ತಲಾಖ್ ಸಂಬಂಧ ಪಟ್ಟಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದಾರೆ.
ತ್ರಿವಳಿ ತಲಾಖ್  ಅನ್ನು ಹಿಂದೂಗಳ ಪುರಾಣ ಗ್ರಂಥ ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಹೋಲಿಸಿದ್ದಾರೆ. ಜ್ವಲಂತ ಸಮಸ್ಯೆಯಾಗಿರುವ ತ್ರಿವಳಿ ತಲಾಖ್ ಬಗ್ಗೆ ಮೌನ ವಹಿಸುವುದು ದ್ರೌಪದಿಯ ವಸ್ತ್ರಾಪಹರಣದಷ್ಟೇ ಸಮಾನ ತಪ್ಪು ಎಂದು ಹೇಳಿದ್ದಾರೆ.
ದಿವಂಗತ ರಾಜಕಾರಣಿ ಚಂದ್ರಶೇಖರ್ ಅವರ ಸಂಬಂಧಿತ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಯೋಗಿ ಆದಿತ್ಯನಾಥ್ ಚಂದ್ರಶೇಖರ್ ಕೂಡ  ಸಮಾನ ನಾಗರಿಕ ಸಂಹಿತೆಯ ಪರವಾಗಿದ್ದರು ಎಂದು ಹೇಳಿದ್ದಾರೆ. ಎಲ್ಲಾ ಮುಸ್ಲಿಂ ಸಹೋದರಿಯರಿಗೆ ನ್ಯಾಯ ಸಿಗಬೇಕು ಎಂದು ಅವರು ತಿಳಿಸಿದ್ದಾರೆ.
ತ್ರಿವಳಿ ತಲಾಖ್ ಬಗ್ಗೆ ಭಾನುವಾರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇದೊಂದು ಕೆಟ್ಟ ಸಾಮಾಜಿಕ ಪಿಡುಗು ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಳೆ ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ತೈಲ ಸಂಸ್ಕರಣಾ ಘಟಕದಲ್ಲಿ ಭಾರೀ ಅಗ್ನಿ ಅವಘಡ!

ಬಸ್‌ನಲ್ಲಿ ನಿಧಾನಕ್ಕೆ ಕೈ ಹಾಕಿದ, ಸುಮ್ನೆ ಬಿಡ್ತಿನಾ?: ಕಹಿ ಅನುಭವ ಬಿಚ್ಚಿಟ್ಟ Bigg Boss ರಿಷಾ ಗೌಡ

ಬುರ್ಖಾ ಧರಿಸದಿದ್ದರೆ ರೇಪ್ ಮಾಡುವ ಬೆದರಿಕೆ; ಟೀಂ ಲೀಡರ್ ಕೆಟ್ಟದಾಗಿ ಮುಟ್ಟುತ್ತಿದ್ದ: TCS ಭಯಾನಕತೆ ಬಿಚ್ಚಿಟ್ಟ ಸಂತ್ರಸ್ತೆ

ನೆಹರು ಕಾಶ್ಮೀರಿ ಪಂಡಿತ ಅಲ್ಲ, ಮುಸ್ಲಿಂ ಕುಟುಂಬದಿಂದ ಬಂದಿದ್ದಾರೆ: ಬಿಜೆಪಿ ಮಾಜಿ ಸಂಸದ ವಿವಾದಾತ್ಮಕ ಹೇಳಿಕೆ

ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ: ಸಮುದ್ರದಲ್ಲಿ ಅಲೆಗಳ ಅಬ್ಬರ; ಸುನಾಮಿ ಎಚ್ಚರಿಕೆ

SCROLL FOR NEXT