ಸೈಕಲ್ ಮೇಲೆ ಮೃತದೇಹ ಸಾಗಿಸುತ್ತಿರುವ ದೃಶ್ಯ 
ದೇಶ

ಅಸ್ಸಾಂ: ಸೈಕಲ್ ಮೇಲೆ ಯುವಕನ ಮೃತದೇಹ ರವಾನೆ ವಿಡಿಯೋ ವೈರಲ್; ತನಿಖೆಗೆ ಸಿಎಂ ಆದೇಶ

ಅಸ್ಸಾಂ ಸಿಎಂ ಸರ್ಬನಾನಂದ ಸೋನೋವಾಲ್ ಅವರ ವಿಧಾನಸಭಾ ಕ್ಷೇತ್ರವಾದ ಮಜುಲಿಯಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಹಾಗೂ ರಸ್ತೆ ಇರದ ಕಾರಣ...

ಗುವಾಹಟಿ: ಅಸ್ಸಾಂ ಸಿಎಂ ಸರ್ಬನಾನಂದ ಸೋನೋವಾಲ್ ಅವರ ವಿಧಾನಸಭಾ ಕ್ಷೇತ್ರವಾದ ಮಜುಲಿಯಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಹಾಗೂ ರಸ್ತೆ ಇರದ ಕಾರಣ ಯುವಕನೋರ್ವ ತನ್ನ ಸಹೋದರನ ಶವವನ್ನು ಆಸ್ಪತ್ರೆಯಿಂದ ತನ್ನ ಮನೆಗೆ ಸೈಕಲ್ ಮೇಲೆ ಸಾಗಿಸಿದ ಅಮಾನವೀಯ ಘಟನೆ ನಡೆದಿದೆ. 
ಲೂತ್ ಖಬಾಲು ಗ್ರಾಮದ ಜನರು ಊರಿನಿಂದ ಆಚೆ ಹೋಗಲು ರಸ್ತೆ ಮಾರ್ಗವಿಲ್ಲ. ಆದರೆ ಬ್ರಿಡ್ಜ್ ಮಾತ್ರ ಇದ್ದು ಇದರ ಮೂಲಕವೇ ಮುಖ್ಯ ರಸ್ತೆಗೆ ಸಾಗಬೇಕು. ಈ ಬ್ರಿಡ್ಜ್ ಮೇಲೆ ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಇದೇ ಗ್ರಾಮದ ವ್ಯಕ್ತಿಯೊರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶವ ಸಾಗಾಣೆಗಾಗಿ ಸೈಕಲ್ ಮೇಲೆ ತೆಗೆದುಕೊಂಡು ಹೋಗಲಾಗಿದೆ. 
ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಸಿಎಂ ಅವರು ಘಟನೆ ಕುರಿತಂತೆ ಸಂತಾಪ ಸೂಚಿಸಿ ತನಿಖೆಗೆ ಆದೇಶಿಸಿದ್ದಾರೆ. ಘಟನೆ ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 9ನೇ ಶತಕ ಸಿಡಿಸಿದ KL Rahul: 10,000 ಅಂತಾರಾಷ್ಟ್ರೀಯ ರನ್!

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!

'ಅಶ್ಲೀಲ, ಅಸಭ್ಯ, ವಿಕೃತಿ': TVK ಮಹಿಳಾ ಅಭ್ಯರ್ಥಿ ಕುರಿತ ಸ್ಟಾಲಿನ್ ಹೇಳಿ ಖಂಡಿಸಿದ CM ವಿಜಯ್; ಚುನಾವಣಾ ಆಯೋಗಕ್ಕೆ ದೂರು

ನೋಯ್ಡಾದ 'ಸೂಪರ್ನೋವಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ! ಭಯಾನಕ Video