ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ನವದೆಹಲಿ: ಮುಸ್ಲಿಂ ಸಮುದಾಯದ ಮತದಾರರು ಬಿಜೆಪಿಗೆ ಮತ ಹಾಕುವುದಿಲ್ಲ. ಆದರೂ, ಕೇಂದ್ರ ಸರ್ಕಾರ ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೈಂಡ್ ಮೈನ್ ಶೃಂಗದಲ್ಲಿ ಮಾತನಾಡಿರುವ ಅವರು, ಮುಸ್ಲಿಂ ಸಮುದಾಯದವರು ನಮಗೆ ಮತ ಹಾಕುವುದಿಲ್ಲ. ಆದರೂ ನಾವು ಅವರಿಗೆ ಸರಿಯಾದ ಪ್ರಾತಿನಿಧ್ಯ ನೀಡಿದ್ದೇವೆಯೇ ಅಥವಾ ಇಲ್ಲವೇ? ರಾಷ್ಟ್ರದಲ್ಲಿ ನಮ್ಮ ಪಕ್ಷದ 13 ಮುಖ್ಯಮಂತ್ರಿಗಳಿದ್ದಾರೆ. ಕೈಗಾರಿಕೆ ಅಥವಾ ಸೇವಾ ವಲಯದಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನು ನಾವು ಸಂತ್ರಸ್ತರನ್ನಾಗಿ ಮಾಡಿದ್ದೇವೆಯೇ? ನಾವು ಅವರನ್ನು ಅಮಾನತು ಮಾಡಿದ್ದೇವೆಯೇ? ಎಂದು ಪ್ರಶ್ನಿಸಿದರು.
ಸಂಸ್ಕೃತಿ ಮತ್ತು ವೈವಿಧ್ಯತೆ ಮೇಲೆ ಅಭಿವೃದ್ಧಿಯ ಪರಿಣಾಮದ ಕುರಿತ ಪ್ರಶ್ನೆಗೆ ಉತ್ತರಿಸುವ ಅವರು, ಭಾರತ ದೇಶದ ಸಂಸ್ಕೃತಿ ಮತ್ತು ವೈವಿಧ್ಯತೆಗೆ ನಾವು ಸೆಲ್ಯೂಟ್ ಹೊಡೆಯುತ್ತೇವೆ. ಈ ವಿಚಾರವನ್ನು ನಾವು ಎರಡು ರೀತಿಯಲ್ಲಿ ನೋಡಬಹುದು. ಹಲವು ವರ್ಷಗಳಿಂದಲೂ ನಮ್ಮ ವಿರುದ್ಧ ಪ್ರಚಾರಗಳನ್ನು ಮಾಡಲಾಗುತ್ತಿದೆ. ಆದರೂ, ನಾವು ದೇಶದ ಜನತೆಯ ಆಶೀರ್ವಾದದ ಮೇಲೆ ಈ ಹಂತಕ್ಕೆ ಬಂದು ನಿಂತಿದ್ದೇವೆ.
ಇತ್ತೀಚಿನ ಬೆಳವಣಿಗೆಯಂತೆಯೇ ವಿಧಾನಸಭಾ ಚುನಾವಣೆಯನ್ನು ತೆಗೆದುಕೊಂಡರೆ, ಉತ್ತರಪ್ರದೇಶ ಹಾಗೂ ಉತ್ತರಾಖಂಡ ರಾಜ್ಯದಲ್ಲಿ ಬಿಜೆಪಿ ಅತ್ಯುತ್ತಮ ಅಂಕವನ್ನು ಗಳಿಸಿತ್ತು. ಗೋವಾ, ಮಣಿಪುರದಲ್ಲೂ ಪಕ್ಷದ ಸರ್ಕಾರವನ್ನು ರಚನೆ ಮಾಡಿತು. ಪಂಜಾಬ್ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಬಹುಮತ ಸಾಬೀತು ಪಡಿಸಿತು.
ಮುಸ್ಲಿಂ ಪ್ರಾಬಲ್ಯವುಳ್ಳ ಹಲವು ಪ್ರದೇಶ ಹಾಗೂ ಗ್ರಾಮಗಳಇಗೆ ನಾವು ಭೇಟಿ ನೀಡಿದ್ದೆವು. ಈ ಪ್ರದೇಶಗಳಲ್ಲಿ ಸಾಕಷ್ಟು ಮುಸ್ಲಿಂ ಯುವಕರು ಸಾಮಾನ್ಯ ಸೇವಾ ಕೇಂದ್ರಗಳನ್ನು ನಡೆಸುತ್ತಿದ್ದು, ಅಂತರ್ಜಾಲದ ಮೂಲಕ ಸರ್ಕಾರದ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಕೆಲಸ ಮಾಡುತ್ತಿದ್ದಾರೆ.
ಮಿ. ಕರಿಮುಲ್ ಹಕ್ ಅವರು ತಮ್ಮ ಮೊಟಾರ್ ಸೈಕಲ್ ನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿಕೊಂಡು, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ. ಈ ವರೆಗೂ ಅವರು ಕನಿಷ್ಟವೆಂದರೂ 2 ಸಾವಿರ ಜನರ ಜೀವವನ್ನು ಕಾಪಾಡಿಸಿದ್ದಾರೆ. ಹಕ್ ಅವರ ಧರ್ಮ ಯಾವುದು ಎಂಬುದನ್ನು ನಾವು ಎಂದಿಗೂ ನೋಡಿಲ್ಲ. ಆವರು ನಮಗೆ ಮತ ಹಾಕಲಿ ಬಿಡಲಿ. ಎಲ್ಲಿಯೇ ಸಮಸ್ಯೆ ಕುರಿತ ದನಿಗಳು ಏಳಿದರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆ ಸಮಸ್ಯೆಯತ್ತ ತಿರುಗಿ ನೋಡುತ್ತಿದ್ದಾರೆ. ಯೋಗಿ ಆದಿತ್ಯಾನಾಥ್ ಅವರು ಜನಪ್ರಿಯನಾಯಕನಾಗಿದ್ದು, ಅವರು ನಡೆಸುತ್ತಿರುವ ರೀತಿ, ಅಭಿವೃದ್ಧಿ ಕಾರ್ಯಗಳನ್ನು ನೀವೇ ನೋಡುತ್ತಿದ್ದೀರಿ.
ಕೆಲ ಎಡ ಪಕ್ಷಗಳು ಹಾಗೂ ಕೆಲ ಪತ್ರಕರ್ತರು ಮಿ. ಮೋದಿಯವರ ವಿರುದ್ಧ ದ್ವೇಷವನ್ನು ಹುಟ್ಟುಹಾಕುತ್ತಿದ್ದಾರೆ. ಅಂತರ ಸ್ನೇಹಿತರೊಡನೆ ನಮಗೆ ಸಮಸ್ಯೆಯಿದೆ. ಅಂತಹವಿರಿಗೆ ಈ ಮೂಲಕ ಒಳ್ಳೆಯದಾಗಲಿ ಎಂದು ಶುಭಹಾರೈಸುತ್ತೇನೆಂದು ತಿಳಿಸಿದ್ದಾರೆ.