ಮೇಜರ್ ಕಮಲೇಶ್ ಪಾಂಡೆ ಅಂತ್ಯ ಸಂಸ್ಕಾರದ ವೇಳೆ ಪಾಕಿಸ್ತಾನ್ ಮುರ್ದಾಬಾದ್ ಘೋಷಣೆ ಕೂಗಿ ಆಕ್ರೋಶ
ಡೆಹ್ರಾಡೂನ್: ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ್ದ ದಾಳಿಯಲ್ಲಿ ಹುತಾತ್ಮರಾಗಿದ್ದ ಮೇಜರ್ ಕಮಲೇಶ್ ಪಾಂಟೆಯವರ ಅಂತ್ಯ ಸಂಸ್ಕಾರದ ವೇಳೆ ಪಾಕಿಸ್ತಾನ್ ಮುರ್ದಾಬಾದ್ ಘೋಷಣೆ ಕೂಗಿ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀಪದ ಶೋಪಿಯಾನ್ ಜಿಲ್ಲೆಯಲ್ಲಿ ಹಿಬ್ಜುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರರು ನಡೆಸಿದ್ದ ದಾಳಿಯಲ್ಲಿ ಮೇಜರ್ ಕಮಲೇಶ್ ಪಾಂಡೆಯವರು ಹುತಾತ್ಮರಾಗಿದ್ದರು. ಪಾಂಡೆಯವರ ಅಂತಿಮ ಸಂಸ್ಕಾರ ಉತ್ತರಾಖಂಡ್ ನ ಹಲ್ದ್ವಾನಿ ಗ್ರಾಮದಲ್ಲಿ ನೆರವೇರಿತು. ಹುತಾತ್ಮ ಯೋಧನಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಅಂತಿಮ ಸಂಸ್ಕಾರದಲ್ಲಿ ಸೇನಾಧಿಕಾರಿಗಳೂ ಕೂಡ ಭಾಗಿಯಾಗಿದ್ದರು.
ಅಂತ್ಯ ಸಂಸ್ಕಾರದ ವೇಳೆ ಸ್ಥಳದಲ್ಲಿ ನೆರೆದಿದ್ದ ನಾಗರೀಕರು ಪಾಕಿಸ್ತಾನ್ ಮುರ್ದಾಬಾದ್ ಘೋಷಣೆ ಕೂಗುವ ಮೂಲಕ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೋಪಿಯಾನ್ ಜಿಲ್ಲೆಯ ಇಮಾಮ್ ಸಾಹಬ್ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ನಡೆದ ಗುಂಡಿನ ಕಾಳಗದಲ್ಲಿ ಮೇಜರ್ ಕಮಲ್ ಪಾಂಡೆ ಹಾಗೂ ಮತ್ತೊಬ್ಬರು ಯೋಧರು ಹುತಾತ್ಮರಾಗಿದ್ದರು.