ದೇಶ

ಸ್ವಾತಂತ್ರ್ಯ ದಿನ ಭಾಷಣದ ಮೂಲಕ ಮೋದಿ ಉತ್ತಮ ಆಡಳಿತಕ್ಕೆ ಮಂತ್ರಗಳನ್ನು ನೀಡಿದ್ದಾರೆ: ರಾಜನಾಥ ಸಿಂಗ್

ಸ್ವಾತಂತ್ರ್ಯ ದಿನದ ಭಾಷಣದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತಮ ಆಡಳಿತಕ್ಕೆ ಮಂತ್ರಗಳನ್ನು ನೀಡಿದ್ದಾರೆಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಬುಧವಾರ ಹೇಳಿದ್ದಾರೆ...

ನವದೆಹಲಿ: ಸ್ವಾತಂತ್ರ್ಯ ದಿನದ ಭಾಷಣದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತಮ ಆಡಳಿತಕ್ಕೆ ಮಂತ್ರಗಳನ್ನು ನೀಡಿದ್ದಾರೆಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಬುಧವಾರ ಹೇಳಿದ್ದಾರೆ. 
ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಕಾಶ್ಮೀರ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ್ದ ಭಾಷಣವನ್ನು ರಾಜನಾಥ ಸಿಂಗ್ ಅವರು ಸ್ವಾಗತಿಸಿದ್ದಾರೆ. 
ಭಾಷಣದ ವೇಳೆ ಮೋದಿಯವರು ಚಕ್ರಧಾರಿಯಿಂದ ಚರಕಧಾರಿಯವರೆಗಿನ ದೇಶದ ಪ್ರಯಾಣವನ್ನು ಪ್ರಸ್ತಾಪ ಮಾಡಿದ್ದರು. ಭಾಷಣದಲ್ಲಿ ಆಧುನಿಕ ಯುಗದವರೆಗಿನ ಸ್ಫೂರ್ತಿದಾಯಕ ಮೌಲ್ಯಗಳನ್ನು ಚಿತ್ರಣಗೊಂಡಿದ್ದವು.ನಾವು ಶಾಶ್ವತ ರಾಷ್ಟ್ರದಲ್ಲಿದ್ದೇವೆಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಪ್ರಧಾನಿ ಮೋದಿಯವರು ಉತ್ತರ ಆಡಳಿತಕ್ಕೆ ಮಂತ್ರಗಳನ್ನು ಹೇಳಿಕೊಂಡಿದ್ದಾರೆ. ಒಬ್ಬ ಸಹೋದ್ಯೋಗಿಯಾಗಿ ಮೋದಿಯವರ ಭಾಷಣ ಹಾಗೂ ಹೇಳಿಕೆಯನ್ನು ಪ್ರಶಂಸಿಸಬೇಕೆಂದು ಎನಿಸುತ್ತಿದೆ. ಭಾಷಣದ ಪ್ರತೀಯೊಂದು ಹೇಳಿಕೆಯೂ ಪ್ರಮುಖವಾಗಿತ್ತು. 

ಕಾಶ್ಮೀರ ಕುರಿತಂತೆ ಪ್ರಧಾನಿ ಮೋದಿಯವರು ನೀಡಿದ್ದ ಹೇಳಿಕೆ ಹೃದಯಸ್ಪರ್ಶಿಯಾಗಿತ್ತು. ಸಾಮಾನ್ಯ ಕಾಶ್ಮೀರಿಗನೂ ಶಾಂತಿ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕೆಂದು ಸರ್ಕಾರ ಬಯಸುತ್ತದೆ. ಕಾಶ್ಮೀರದಲ್ಲಿ ಶಾಂತಿಗೆ ಧಕ್ಕೆಯುಂಟು ಮಾಡಲು ಯತ್ನಿಸುತ್ತಿರುವ ಕೆಲ ಸಮಾಜಘಾತುಕ ಶಕ್ತಿಗಳಿಗೆ ಕಾಶ್ಮೀರಿಗರು ಬಲಿಪಶುಗಳಾಗುತ್ತಿದ್ದಾರೆಂದು ತಿಳಿಸಿದ್ದಾರೆ. 

71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನಲೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ಮೋದಿಯವರು, ಗುಂಡುಗಳಾಗಲೀ ಅಥವಾ ಬೈಗುಗಳಿಂದಾಗಲೀ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ. ಕೇವಲ ಪ್ರೀತಿಯಿಂದ ಮಾತ್ರ  ಬಿಕ್ಕಟ್ಟು ಬಗೆಹರಿಯಲು ಸಾಧ್ಯ. ಕಾಶ್ಮೀರ ಸಮಸ್ಯೆಗೆ ಬಗೆಹರಿಸಲು ಬಂದೂಕುಗಳು ಬೇಕಿಲ್ಲ, ಪರಸ್ಪರ ಅಪ್ಪುಗೆಯೇ ಸಾಕು ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ

ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಬಸ್‌ಗೆ ಬೆಂಕಿ; ಚಾಲಕ-ಕ್ಲೀನರ್ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಸೇಫ್, Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್