ಹರ್ಯಾಣ: ಡೇರಾ ಸಚ್ಚಾ ಫೌಂಡೇಷನ್ ನ ಬಾಬಾ ರಾಮ್ ರಹೀಮ್ ಅತ್ಯಾಚಾರ ಪ್ರಕರಣದ ದೋಷಿ ಎಂದು ಕೋರ್ಟ್ ತೀರ್ಪು ನೀಡುತ್ತಿದ್ದಂತೆಯೇ ಉಂಟಾಗಿದ್ದ ಹಿಂಸಾಚಾರವನ್ನು ತಡೆಗಟ್ಟಲು ಸರಿಯಾಗಿ ಕೆಲಸ ಮಾಡಿದ್ದೇವೆ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ರಾಜೀನಾಮೆ ನೀಡಬೇಕೆಂದು ವರಿಷ್ಠರು ಸೂಚಿಸಿರುವುದನ್ನು ಮನೋಹರ್ ಲಾಲ್ ಖಟ್ಟರ್ ಅಲ್ಲಗಳೆದಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಿರುವ ಹರ್ಯಾಣ ಸಿಎಂ ಖಟ್ಟರ್, ಪಂಜಾಬ್-ಹಾರ್ಯಾಣ ಹೈಕೋರ್ಟ್ ನ ತೀರ್ಪಿಗೆ ಅನುಗುಣವಾಗಿ ನಡೆದುಕೊಂಡಿರುವುದಾಗಿ ಹೇಳಿದ್ದಾರೆ. ನನ್ನ ರಾಜೀನಾಮೆಯನ್ನು ಯಾರು ಕೇಳುತ್ತಾರೋ ಕೇಳಲಿ, ಆದರೆ ನಮ್ಮ ಕೆಲಸವನ್ನು ನಾವು ಸರಿಯಾಗಿ ನಿಭಾಯಿಸಿದ್ದೇವೆ ಎಂದು ಹೇಳಿದ್ದಾರೆ.