ಕಟಿಹಾರ್: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಘಟನೆ ಬಿಹಾರದ ಕಟಿಹಾರ ನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಆಟೋದಲ್ಲಿ ಒಂದೇ ಕುಟುಂಬದ 16 ಮಂದಿ ಪ್ರಯಾಣಿಸುತ್ತಿದ್ದರು. ನಿಯಂತ್ರಣ ಕಳೆದುಕೊಂಡ ಆಟೋ ರಸ್ತೆಯ ಪಕ್ಕ ಕಂದಕಕ್ಕೆ ಜಾರಿ ಮಗುಚಿ ಬಿದ್ದಿತು. ಘಟನೆಯಲ್ಲಿ 10 ಮಂದಿಗೆ ಗಾಯಗಳಾಗಿವೆ.
ಕುರ್ಸೆಲಾ ಥಾಣೆಯ ಹತ್ತಿರ ಗ್ವಾಲ್ ತೊಲಿ ಮಂದಿರ ಸಮೀಪ ಈ ಘಟನೆ ನಡೆದಿದೆ.
ದೇವಗಾರ್ ದೇವಸ್ಥಾನದಲ್ಲಿ ಮುಂಡನ ಸಮಾರಂಭ ಮುಗಿಸಿ ಒಂದೇ ಕುಟುಂಬದ 16 ಮಂದಿ ತಮ್ಮ ಊರಿಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದರು.ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.