ಪಿಡಿಪಿ ಸಚಿವ ಇಮ್ರಾನ್ ಅನ್ಸಾರಿ 
ದೇಶ

ಇಲ್ಲೇ ಹತ್ಯೆ ಮಾಡಿಬಿಡುವೆ: ವಿಧಾನಸಭೆಯಲ್ಲೇ ಪಿಡಿಪಿ ಸಚಿವ ಅನ್ಸಾರಿ ಬೆದರಿಕೆ

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಮಂಗಳವಾರ ಜಿಎಸ್ ಟಿ ಮಸೂದೆ ಅಂಗೀಕಾರ ಸಂಬಂಧ ಚರ್ಚೆ ವೇಳೆ ಸರ್ಕಾರ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ ನಡೆದಿದೆ...

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಮಂಗಳವಾರ ಜಿಎಸ್ ಟಿ ಮಸೂದೆ ಅಂಗೀಕಾರ ಸಂಬಂಧ ಚರ್ಚೆ ವೇಳೆ ಸರ್ಕಾರ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ ನಡೆದಿದೆ. 
ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ಕುರಿತಂತೆ ನಡೆದ ಚರ್ಚೆ ವೇಳೆ ನ್ಯಾಷನಲ್ ಕಾನ್ಫರೆನ್ಸ್ ನ ಶಾಸಕ ದೇವೇಂದರ್ ರಾಣಾ, ಪ್ರಸಕ್ತ ರೀತಿಯಲ್ಲಿ ಜಿಎಸ್ ಟಿ ಅಂಗೀಕಾರದ ವಿಷಯದಲ್ಲಿ ರಾಜಕೀಯ ಬೇಡ. ರಾಜ್ಯಕ್ಕೆ ಯಾವುದೂ ಒಳ್ಳೆಯದೋ ಆ ರೀತಿಯಲ್ಲಿ ಅಂಗೀಕಾರಕ್ಕೆ ಎಲ್ಲಾ ಪಕ್ಷಗಳು ಒಮ್ಮತಕ್ಕೆ ಬರಬೇಕು ಎಂದರು. 
ಈ ವೇಳೆ ಎದ್ದುನಿಂತ ಪಿಡಿಪಿ ಸಚಿವ ಇಮ್ರಾನ್ ಅನ್ಸಾರಿ, ರಾಣಾ ಸದನದಲ್ಲಿ ಜಿಎಸ್ ಟಿ ವಿರೋಧಿಸುತ್ತಾರೆ. ಆದರೆ, ಹೊರಗಡೆ ತಮ್ಮ ಉದ್ಯಮಕ್ಕೆ ಜಿಎಸ್ ಟಿ ನಂಬರ್ ಪಡೆದುಕೊಂಡಿದ್ದಾರೆ ಎಂದು ಕಿಡಿಕಾರಿದರು. 
ಈ ವೇಳೆ ರಾಣಾ ಆಕ್ಷೇಪಿಸಿದಾಗ, ನಿನ್ನ ಬಣ್ಣ ಎಲ್ಲಾ ನನಗೆ ಗೊತ್ತು. ನಿನಗಿಂತ ದೊಡ್ಡ ಕಳ್ಳ ಇಲ್ಲ. ನಕಲಿ ಹೆಸರಿನಲ್ಲಿ ಅಕ್ರಮ ನಡೆಸುತ್ತಿದ್ದೀಯಾ ಎಂದು ಆರೋಪಿಸಿದರು. ಇದಕ್ಕೆ ರಾಣಾ, ನಾನೇನು ತೆರಿಗೆ ವಂಚನೆ ಮಾಡಿಲ್ಲ ಎಂದಾಗ, ಜೊತೆಗೆ ಮನಸ್ಸು ಮಾಡಿದರೆ ಇಲ್ಲೇ ನಿನ್ನ ಹತ್ಯೆ ಮಾಡಬಲ್ಲೆ ಎಂದು ರಾಣಾ ವಿರುದ್ಧ ಅನ್ಸಾರಿ ಹರಿಹಾಯ್ದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!