ಸಂಗ್ರಹ ಚಿತ್ರ 
ದೇಶ

ಸಿಕ್ಕಿಂ ಗಡಿ ವಿವಾದ: ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದ ಹೊರೆತು ಮಾತುಕತೆ ಇಲ್ಲ- ಭಾರತಕ್ಕೆ ಚೀನಾ

ಸಿಕ್ಕಿಂ ಗಡಿ ವಿವಾದ ಸಂಬಂಧ ಭಾರತ-ಚೀನಾ ನಡುವಿನ ವಾಕ್ಸಮರ ಮುಂದುವರೆದಿದ್ದು, ಭಾರತ ತನ್ನ ಸೇನೆಯನ್ನು ಕೂಡಲೇ ಹಾಗೂ ಬೇಷರತ್ ಆಗಿ ಹಿಂದಕ್ಕೆ ಕರೆಸಿಕೊಳ್ಳದ ಹೊರತು ಯಾವುದೇ ಮಾತುಕತೆಯನ್ನು ನಡೆಸುವುದಿಲ್ಲ ಎಂದು ಚೀನಾ ಎಚ್ಚರಿಕೆ ನೀಡಿದೆ...

ನವದೆಹಲಿ: ಸಿಕ್ಕಿಂ ಗಡಿ ವಿವಾದ ಸಂಬಂಧ ಭಾರತ-ಚೀನಾ ನಡುವಿನ ವಾಕ್ಸಮರ ಮುಂದುವರೆದಿದ್ದು, ಭಾರತ ತನ್ನ ಸೇನೆಯನ್ನು ಕೂಡಲೇ ಹಾಗೂ ಬೇಷರತ್ ಆಗಿ ಹಿಂದಕ್ಕೆ ಕರೆಸಿಕೊಳ್ಳದ ಹೊರತು ಯಾವುದೇ ಮಾತುಕತೆಯನ್ನು ನಡೆಸುವುದಿಲ್ಲ ಎಂದು ಚೀನಾ ಎಚ್ಚರಿಕೆ ನೀಡಿದೆ. 
ಸಿಕ್ಕಿಂ ಗಡಿ ವಿವಾದ ಕುರಿತಂತೆ ವಿಡಿಯೋ ಮೂಲಕ ಭಾರತದಲ್ಲಿನ ಚೀನಾ ದೂತವಾತದಲ್ಲಿರುವ ರಾಜಕೀಯ ಸಲಹೆಗಾರ ಲಿ ಯಾ ಅವರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಉಭಯ ರಾಷ್ಟ್ರಗಳ ನಡುವೆ ಸಿಕ್ಕಿಂ ಗಡಿಗೆ ಸಂಬಂಧಿಸಿದಂತೆ ಇರುವ ಯಾವುದೇ ವಿವಾದಗಳನ್ನು ಇತ್ಯರ್ಥಪಡಿಸುವುದಕ್ಕೂ, ಅರ್ಥಪೂರ್ಣ ಮಾತುಕತೆಯನ್ನು ಕೈಗೊಳ್ಳುವುದಕ್ಕೂ ಮುನ್ನ ಭಾರತ ಕೂಡಲೇ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಹೇಳಿದ್ದಾರೆ. 
ಚೀನಾ-ಭಾರತ ನಡುವೆ ಯಾವುದೇ ರೀತಿಯ ಅರ್ಥಪೂರ್ಣ ಮಾತುಕತೆ ನಡೆಸಲು ಸಾಧ್ಯವಾಗಬೇಕಾದರೆ, ಅದಕ್ಕೂ ಮುನ್ನ ಭಾರತ ಸಿಕ್ಕಿಂ ಗಡಿಯಿಂದ ತನ್ನ ಸೇನೆಯನ್ನು ಕೂಡಲೇ ಹಿಂದಕ್ಕೆ ಕರೆಯಬೇಕು. ಇಲ್ಲದೇ, ಹೋದರೆ ಚೀನಾ ಭಾರತದೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸಲ್ಲ

ಡೋಕ್ಲಾಮ್ ಭೂತಾನ್ ಗೆ ಸೇರಿದ್ದು ಎಂದು ಭಾರತ ಹೇಳುತ್ತಿದೆ. ಆದರೆ, ಇದಕ್ಕೆ ಯಾವುದೇ ಬೆಂಬಲಗಳಾಗಲೀ, ದಾಖಲೆಗಳಾಗಲೀ ಇಲ್ಲ. ಡೋಕ್ಲಾಮ್ ನಮ್ಮದಾಗಿದ್ದು, ನಮ್ಮದು ಎಂಬುದನ್ನು ಸಾಬೀತುಪಡಿಸಲು ನಮ್ಮ ಬಳಿ ಬಲವಾದ ದಾಖಲೆಗಳಿವೆ. ಚೀನಿಯರ ಗಡಿ ನಿವಾಸಿಗಳಿಗೆ ಡೋಕ್ಲಾಂ ಸಾಂಪ್ರದಾಯಿಕ ಹುಲ್ಲುಗಾವಲು ಪ್ರದೇಶವಾಗಿದೆ. ಈಗಲೂ ಆ ಪ್ರದೇಶದಲ್ಲಿ ಚೀನಾ ಪಡೆಗಳು ಕಾವಲು ಕಾಯುತ್ತಿದೆ. ಚೀನಾದ ಜಾನುವಾರುಗಳ ಹುಲ್ಲುಗಾವಲು ಪ್ರದೇಶ ಡೋಕ್ಲಾಮ್ ಆಗಿದ್ದು, ಅಲ್ಲಿನ ಜನರಿಗೆ ಈಗಾಗಲೇ ಜೀವನ ನಡೆಸಲು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. 

ಡೋಕ್ಲಾಮ್ ಚೀನಾದ ಭೂಭಾಗವಾಗಿದ್ದು, ಚೀನಾದ ಸಾರ್ವಭೌಮತ್ವಕ್ಕೆ ಸೇರಿದ್ದಾಗಿದ್ದರಿಂದಲೇ ಜನರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ, ಭಾರತೀಯ ಪಡೆಗಳು ಜೂನ್.18 ರಂದಲು ಚೀನಾದ ಗಡಿ ನುಗ್ಗಿದ್ದು, ಅಲ್ಲಿನ ಪರಿಸ್ಥಿತಿಯನ್ನು ಬದಲಿಸಿದ್ದಾರೆಂದು ಆರೋಪಿಸಿದ್ದಾರೆ. 

ಸಿಕ್ಕಿಂ ಮತ್ತು ಟಿಬೆಟ್ ಗೆ ಸಂಬಂಧಪಟ್ಟಂತೆ 1890ರಲ್ಲಿ ಆಗಿದ್ದ ಚೀನಾ ಬ್ರಿಟನ್ ಒಪ್ಪಂದದ ಸಿಕ್ಕಿಂ ಗಡಿಯಲ್ಲಿನ ಡೋಕ್ಲಾಮ್ ಪ್ರದೇಶವವು ಚೀನಾಗೆ ಸೇರಿದ್ದಾಗಿದೆ. ಇದೀಗ ಚೀನಾದ ಪ್ರದೇಶಿಕ ಸಾರ್ವಭೌಮತ್ವವನ್ನು ಭಾರತೀಯ ಸೇನಾ ಪಡೆಗಳು ದುರ್ಬಲಗೊಳಿಸಿವೆ. ಇದೀಗ ಭಾರತ ಡೋಕ್ಲಾಮ್ ಭೂತಾನ್ ಗೆ ಸೇರಿದ್ದು ಎಂದು ಹೇಳುತ್ತಿದೆ ಎಂದು ಲಿ ಯಾ ವಿಡಿಯೋದಲ್ಲಿ ತಿಳಿಸಿದ್ದಾರೆ. 
ಕಳೆದ ಒಂದು ತಿಂಗಳಿನಿಂದ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ನಾಶ ಮಾಡಿದ್ದರು.  ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿತ್ತು. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು.ಜೂನ್‌ 6 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದೆ. 

ಭಾರತದ ಗಡಿ ರಕ್ಷಣಾ ದೃಷ್ಟಿಯಿಂದ ಭೂತಾನ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತ ಸಿಲಿಗುರಿ ಕಾರಿಡಾರ್ ನಿರ್ಮಿಸುತ್ತಿದೆ. ಒಂದು ವೇಳೆ ಈ ಕಾರಿಡಾರ್ ಪೂರ್ಣಗೊಂಡಿದ್ದೇ ಆದರೆ ಗಡಿಯಲ್ಲಿ ಚೀನಿ ಸೈನಿಕರು ಏನೇ  ಯೋಜನೆ ರೂಪಿಸಿದರೂ ಭಾರತಕ್ಕೆ ಆದರ ಮಾಹಿತಿ ಲಭ್ಯವಾಗುತ್ತದೆ. ಇನ್ನು ಇದೇ ಕಾರಿಡಾರ್ ಗೆ ಹೊಂದಿಕೊಂಡಂತೆ ಭಾರತೀಯ ಪಡೆಗಳ ಶಿಬಿರವಿದ್ದು, ಇದೇ ಕಾರಣಕ್ಕೆ ಚೀನಾ ಕೂಡ ಡೋಕ್ಲಾಮ್ ಸಮೀಪದಲ್ಲೇ ದಿಢೀರ್ ರಸ್ತೆ  ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನು ಯಾವಾಗ ಭಾರತೀಯ ಸೈನಿಕರು ವಿರೋಧಿಸಿದರೋ ಆಗ ಚೀನೀ ಸೈನಿಕರು ಕಾಲುಕೆರೆದು ಸಂಘರ್ಷಕ್ಕೆ ಮುಂದಾಗಿದ್ದಾರೆ ಎಂದು ಹೇಳಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video