ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ 
ದೇಶ

ಕಾಶ್ಮೀರ ಸಮಸ್ಯೆಗೆ ಪಾಕ್ ಕಾರಣವಲ್ಲ; ಮಾಜಿ ಸಿಎಂ ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯಲ್ಲಿ ಪಾಕಿಸ್ತಾನ ಲಾಭ ಮಾಡಿಕೊಳ್ಳುತ್ತಿದೆ ಅಷ್ಟೆ. ಕಾಶ್ಮೀರದಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣಕ್ಕೆ ಪಾಕಿಸ್ತಾನ ಕಾರಣವಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್...

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯಲ್ಲಿ ಪಾಕಿಸ್ತಾನ ಲಾಭ ಮಾಡಿಕೊಳ್ಳುತ್ತಿದೆ ಅಷ್ಟೆ. ಕಾಶ್ಮೀರದಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣಕ್ಕೆ ಪಾಕಿಸ್ತಾನ ಕಾರಣವಲ್ಲ ಎಂದು  ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಶನಿವಾರ ಹೇಳಿದ್ದಾರೆ. 
ಕಾಶ್ಮೀರ ಸಮಾವೇಶದಲ್ಲಿ ಮಾತನಾಡಿರುವ ಅವರು, ಸಮಸ್ಯೆ ಪೀಡಿತ ರಾಜ್ಯದಲ್ಲಿ ನಡೆಯುತ್ತಿರುವುದಕ್ಕೆಲ್ಲಾ ಪಾಕಿಸ್ತಾನವನ್ನು ದೂರುವುದು ವಾಡಿಕೆಯಾಗಿ ಬಿಟ್ಟಿದೆ ಎಂಬ ಅರಿವು ನನಗಿದೆ. ಆದರೆ ಇದು ಸತ್ಯವಲ್ಲ. ಕಾಶ್ಮೀರದಲ್ಲಿ ಉಂಟಾಗಿರುವ ಸಮಸ್ಯೆಗಳಿಂದ ಪಾಕಿಸ್ತಾನ ಲಾಭ ಪಡೆದುಕೊಳ್ಳುತ್ತಿದೆ. ಆದರೆ, ಹಿಂಸಾಚಾರಕ್ಕೆ ಅವರು ಕಾರಣರಲ್ಲ ಎಂದು ಹೇಳಿದ್ದಾರೆ. 
3 ದಶಕಗಳ ಪ್ರತ್ಯೇಕತವಾದದ ಯುದ್ಧದಲ್ಲಿ ಕಾಶ್ಮೀರ ಕಣಿವೆಯಲ್ಲಿ 2008, 2010, 2016ರಲ್ಲಿ ನಡೆದ ಭೀಕರ ಬೀದಿ ಪ್ರತಿಭಟನೆಗಳ ಬಗ್ಗೆ ಅವರು ಇದೇ ಸಂದರ್ಭದಲ್ಲಿ ಅವರು ಪ್ರಸ್ತಾಪ ಮಾಡಿದ್ದಾರೆ. 
ಕಾಶ್ಮೀರದಲ್ಲಿ ಉಂಟಾಗಿರುವ ನಿರಂತರ ಹಿಂಸಾಚಾರ ಕುರಿತಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾಡಿರುವ ಅವರು, ನಮ್ಮ ಜವಾಬ್ದಾರಿಯಿಂದ ನಾವು ಹೇಗೆ ಬಿಡುಗಡೆಗೊಳ್ಳುವುದು? ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳಿಗೆ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳು ಮಾತ್ರವೇ ಕಾರಣವಲ್ಲ. ಕೇಂದ್ರ ಸರ್ಕಾರ ಕೂಡ ಜವಾಬ್ದಾರಿಯಾಗಿದೆ. ಯುಪಿಎ ಆಗಲೀ ಅಥವಾ ಎನ್'ಡಿಎ ಸರ್ಕಾರಗಳು ಆಗಲೀ ಕಾರಣವಾಗುತ್ತದೆ. 
ಕಾಶ್ಮೀರ ಹಿಂಸಾಚಾರ ಕುರಿತಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ದೂಷಿಸುತ್ತದೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚಾಗಿರುತ್ತದೆ ಎಂದಿದ್ದಾರೆ. 
ನಂತರ ಹಿಂಸಾಚಾರ ಮತ್ತು ಪ್ರತಿಭಟನೆ ಹಿನ್ನಲೆಯಲ್ಲಿ ಅನಂತ್ ನಾಗ್ ಜಿಲ್ಲೆಯಲ್ಲಿ ರದ್ದುಗೊಳಿಸಲಾಗಿದ್ದ ಲೋಕಸಭಾ ಚುನಾವಣೆ ಕುರಿತಂತೆ ಮಾಡನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರದ ಚುನಾವಣೆಯಲ್ಲಿ ಮೊದಲ ಬಾರಿಗೆ ಹುರಿಯತ್ ಕಾನ್ಫರೆನ್ಸ್ ಗೆಲವು ಸಾಧಿಸಿದೆ. 1966ರ ಬಳಿಕ ಚುನಾವಣೆ ನಡೆಸಿದಾಗೆಲೆಲ್ಲಾ ಚುನಾವಣೆ ರದ್ದುಗೊಳ್ಳುತ್ತಿತ್ತು. ಮೊದಲ ಬಾರಿಗೆ ಚುನಾವಣೆ ರದ್ದುಗೊಳಿಸಿದ ಬಳಿಕ ಹುರಿಯತ್'ಗೆ ಗೆಲುವು ದೊರಕಿದೆ. 
ದಕ್ಷಿಣ ಕಾಶ್ಮೀರದಲ್ಲಿ ಚುನಾವಣೆ ರದ್ದುಗೊಳಿಸುವ ಮೂಲಕ ಭಾರತ ಸರ್ಕಾರ ಮತ್ತು ಚುನಾವಣೆ ಆಯೋಗದ ಅಸಾಮರ್ಥ್ಯ ಸಾಬೀತಾಗಿದೆ. ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ

ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಬಸ್‌ಗೆ ಬೆಂಕಿ; ಚಾಲಕ-ಕ್ಲೀನರ್ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಸೇಫ್, Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್