ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಜೊತೆಗೆ ಅಂತರ ಕಾಯ್ದುಕೊಳ್ಳಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಮಾಜವಾದಿ ಪಕ್ಷ ಶುಕ್ರವಾರ ಆಗ್ರಹಿಸಿದೆ.
ಈ ಕುರಿತಂತೆ ಮಾತನಾಡಿರುವ ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರ್ವಾಲ್ ಅವರು, ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರೊಂದಿಗೆ ಪ್ರಧಾನಿ ಮೋದಿಯವರು ಅಂತರ ಕಾಯ್ದುಕೊಳ್ಳಬೇಕು. ಪಾಕಿಸ್ತಾನ ವಿರುದ್ಧ ಭಾರತ ಕಠಿಣ ವರ್ತನೆ ತೋರಬೇಕು. ಅತ್ಯಂತ ಒಳ್ಳೆಯತನ ಕೂಡ ನಮ್ಮ ಬೆನ್ನಿಗೆ ಚೂರಿ ಹಾಕುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಜೊತೆಗೆ ಭಾರತ ಕಠಿಣವಾಗಿ ವರ್ತಿಸಿದರೆ, ನಮ್ಮ ಈ ವರ್ತನೆ ಉಗ್ರವಾದದ ವಿರುದ್ಧವಿರುವ ನಮ್ಮ ನಿಲುವನ್ನು ತೋರಿಸುತ್ತದೆ. ಪಾಕಿಸ್ತಾನದ ಜೊತೆಗೆ ನಾವು ಅಂತರ ಕಾಯ್ದುಕೊಳ್ಳುವ ಅಗತ್ಯವಿದೆ. ಯಾವುದೇ ರೀತಿಯ ಭೇಟಿಯಾದರೂ ಭಾರತ ಪಾಕಿಸ್ತಾನದ ಜೊತೆಗೆ ಕಠಿಣವಾಗಿ ವರ್ತಿಸಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನವಾಜ್ ಷರೀಫ್ ಅವರನ್ನು ನಿರ್ಲಕ್ಷ್ಯತನದಿಂದ ನೋಡಬೇಕು ಎಂದು ತಿಳಿಸಿದ್ದಾರೆ.