ಮಲಪ್ಪುರಂ: ಮಸೀದಿಗಳಲ್ಲಿ ಆಜಾನ್ ಕೂಗುವ ವೇಳೆ ಧ್ವನಿ ವರ್ಧಕ ಬಳಸುವ ಬಗ್ಗೆ ಚರ್ಚೆ ನಡೆಯುತ್ತಿರಬೇಕಾದರೆ, ಕೇರಳದ ಮಸೀದಿಗಳು ಶಬ್ದ ಮಾಲಿನ್ಯ ತಡೆಗೆ ಕೈಗೊಂಡಿರುವ ಕ್ರಮ ಗಮನ ಸೆಳೆದಿದೆ.
ಕೇರಳದ ಮಲಪ್ಪುರಂ ನಲ್ಲಿರುವ 17 ಮಸೀದಿಗಳು ಶಬ್ದ ಮಾಲಿನ್ಯ ತಡೆಗೆ ಮುಂದಾಗಿದ್ದು, 17 ಮಸೀದಿಗಳ ಪೈಕಿ 1 ಮಸೀದಿ ಮಾತ್ರ ಧ್ವನಿ ವರ್ಧಕ ಬಳಸುವುದಾಗಿ ಉಳಿದ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆ ಮಾಡದೇ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಿವೆ.
ವಲಿಯ ಜಮ್ಮಾ ಮಸೀದಿ ಈ ನಿರ್ಧಾರ ಕೈಗೊಂಡಿದ್ದು, ಸುತ್ತಮುತ್ತಲಿರುವ 16 ಮಸೀದಿಗಳ ಧ್ವನಿವರ್ಧಕ ಬಳಕೆ ಮಾಡದಂತೆ ಆದೇಶಿಸಿದೆ. ಜಮ್ಮಾ ಮಸೀದಿ ಅಕ್ಕ ಪಕ್ಕದಲ್ಲೇ 6 ಮಸೀದಿಗಳಿದ್ದು, ಧ್ವನಿ ವರ್ಧಕಗಳನ್ನು ಹೆಚ್ಚು ಬಳಕೆ ಮಾಡುತ್ತಿರುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಶಬ್ದ ಮಾಲಿನ್ಯ ತಡೆಗಟ್ಟಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮದೀಸಿದಿಗಳ ಸಮಿತಿ ಅಧ್ಯಕ್ಷ ಅಬ್ದುಲ್ ಅಜೀಜ್ ಹೇಳಿದ್ದಾರೆ.