ದೇಶ

ಪಾಸ್ ಪೋರ್ಟ್ ಈಗ ಹಿಂದಿಯಲ್ಲೂ ಲಭ್ಯ, ಅರ್ಜಿ ಶುಲ್ಕ ಶೇ.10ರಷ್ಟು ಕಡಿತ: ಸುಷ್ಮಾ

Lingaraj Badiger
ನವದೆಹಲಿ: ಇಷ್ಟು ದಿನ ಕೇವಲ ಇಂಗ್ಲಿಷ್ ನಲ್ಲೇ ಲಭ್ಯವಿದ್ದ ಪಾಸ್ ಪೋರ್ಟ್ ಈಗ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲೂ ದೊರೆಯಲಿದೆ ಎಂದು ಶುಕ್ರವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.
ಇಂದು 1967ರ ಪಾಸ್ ಪೋರ್ಟ್ ಕಾಯ್ದೆ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್ ಅವರು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಹಾಗೂ ಎಂಟು ವರ್ಷದೊಳಗಿನ ಮಕ್ಕಳ ಪಾಸ್ ಪೋರ್ಟ್ ಅರ್ಜಿ ಶುಲ್ಕದಲ್ಲಿ ಶೇ.10 ಕಡಿತಗೊಳಿಸಿರುವುದಾಗಿ ಘೋಷಿಸಿದ್ದಾರೆ.
ವಿದೇಶಾಂಗ ಸಚಿವಾಲಯ ಪಾಸ್ ಪೋರ್ಟ್ ಪಡೆಯಲು ಇದ್ದ ಕೆಲವೊಂದು ಕಠಿಣ ನಿಯಮಗಳನ್ನು ಬದಲಾವಣೆ ಮಾಡಿದ್ದು, ಹೊಸ ನಿಯಮದಲ್ಲಿ ಪೇಪರ್ ಕೆಲಸ ಮತ್ತು ಕೆಲವೊಂದು ದಾಖಲೆಗಳನ್ನು ಕಡಿಮೆ ಮಾಡಲಾಗಿದೆ.
ಈಗ ಸಾಧುಗಳು ಹಾಗೂ ಸನ್ಯಾಸಿಗಳು ತಮ್ಮ ಪಾಸ್ ಪೋರ್ಟ್ ನಲ್ಲಿ ತಮ್ಮ ತಂದೆ-ತಾಯಿಯ ಹೆಸರಿನ ಬದಲು ತಮ್ಮ ಧಾರ್ಮಿಕ ಗುರುಗಳ ಹೆಸರು ಬರೆಯಬಹುದು. ಅಲ್ಲದೆ ವಿಚ್ಛೇದಿತರು ಅರ್ಜಿಯಲ್ಲಿ ತಮ್ಮ ಪೋಷಕರು ಹೆಸರು ಬರೆಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಹೊಸ ಪಾಸ್ ಪೋರ್ಟ್ ನಿಯಮದ ಪ್ರಕಾರ ಜನನ ಪ್ರಮಾಣ ಪತ್ರ ಕಡ್ಡಾಯವಾಗಿ ನೀಡಬೇಕಾಗಿಲ್ಲ.
SCROLL FOR NEXT