ಕೊಲ್ಕೊತಾ; ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಉದಯೋನ್ಮುಖ ಬರಹಗಾರ ಶ್ರೀಜಾಟೋ ಬಂಡೋಪಾಧ್ಯಾಯ ವಿರುದ್ಧ ದೂರು ದಾಖಲಾಗಿದೆ.
ಹಿಂದೂ ಸಮ್ಮತಿ ಎಂಬ ಸಂಘಟನೆಯ 20 ವರ್ಷದ ಅರ್ನಾಬ್ ಸರ್ಕಾರ್ ಎಂಬಾತ ಬಂಡೋಪಾಧ್ಯಾಯ ವಿರುದ್ಧ ದೂರು ದಾಖಲಿಸಿದ್ದಾರೆ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡುವಂಥ ಪೋಸ್ಟ್ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಮಾರ್ಚ್ 19 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಿದ ದಿನದಂದು ಫೇಸ್ ಬುಕ್ ನಲ್ಲಿ ಪ್ರಕಟಿಸಿರುವ ಕವಿತೆಯ 12ನೇ ಸಾಲಿನಲ್ಲಿ ವಿವಾದಾತ್ಮಕ ಪದಗಳಿವೆ ಎಂದು ದೂರಿದ್ದಾರೆ.
ಮುಸ್ಲಿಂ ಮಹಿಳೆಯರನ್ನು ಸಮಾಧಿಯಿಂದ ಹೊರತೆಗೆದು ಅತ್ಯಾಚಾರ ಮಾಡಿ ಎಂಬ ಹೇಳಿಕೆ ನೀಡಿದ್ದ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದ ಶ್ರೀಜಾಟೋ ಬಂಡೋಪಾಧ್ಯಾಯ, ತಮ್ಮ 12 ನೇ ಸಾಲಿನಲ್ಲಿ ತ್ರಿಶೂಲಕ್ಕೆ ಕಾಂಡೋಮ್ ಹಾಕಿ ಎಂದು ಬರೆದಿದ್ದಾರೆ. ಈ ಮಾತುಗಳಿಂದ ಹಿಂದೂಗಳ ಭಾವನೆಗೆ ನೋವುಂಟಾಗಿದೆ, ತ್ರಿಶೂಲ ಹಿಂದೂಗಳ ಪ್ರಮುಖ ಪೂಜನೀಯ ವಸ್ತುವಾಗಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಸಿಲ್ಲಿಗುರಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಡೋಪಾಧ್ಯಾಯ ಪೋಸ್ಟ್ ಗೆ ಸಾವಿರಾರು ಲೈಕ್ಸ್ ಗಳು ಬಂದಿದ್ದು, ಬಾರೀ ಪ್ರಮಾಣದಲ್ಲಿ ಚರ್ಚಗೆ ಕಾರಣವಾಗಿದೆ.