ದೇಶ

45,622 ರೂ. ಕೋಟಿ ಅಘೋಷಿತ ಆದಾಯ ಪತ್ತೆ ಮಾಡಿದ ಐಟಿ ಇಲಾಖೆ

Srinivas Rao BV
ನವದೆಹಲಿ: ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆ ಒಟ್ಟು 45,622 ಕೋಟಿ ಅಘೋಷಿತ ಆದಾಯ ಪತ್ತೆ ಮಾಡಿದೆ. 
ಸುಮಾರು 2,534 ವ್ಯಕ್ತಿಗಳ ತಂಡಗಳ ಆದಾಯದ ಬಗ್ಗೆ ಶೋಧಕಾರ್ಯ ನಡೆಸಿರುವ ಆದಾಯ ತೆರಿಗೆ ಇಲಾಖೆ, ಮುಟ್ಟುಗೋಲು ಹಾಕಿಕೊಂಡಿರುವ ಸುಮಾರು 3,625 ಕೋಟಿ ರೂಪಾಯಿ ಮೌಲ್ಯದ ಆಸ್ತಿ (ನಗದು, ಚಿನ್ನಾಭರಣ ಇತ್ಯಾದಿ)ಯನ್ನು ಹೊರತುಪಡಿಸಿ ಒಟ್ಟು 45,622 ಕೋಟಿ ರೂಪಾಯಿಗಳಷ್ಟು ಅಘೋಷಿತ ಆದಾಯವನ್ನು ಪತ್ತೆ ಮಾಡಿದೆ ಎಂದು ಹಣಕಾಸು ಇಲಾಖೆಯ ರಾಜ್ಯ ಖಾತೆ ಕೇಂದ್ರ ಸಚಿವ ಸಂತೋಷ್ ಕುಮಾರ್ ಗಂಗ್ವರ್ ಲೋಕಸಭೆಗೆ ತಿಳಿಸಿದ್ದಾರೆ. 
2017 ರದ್ದೂ ಸೇರಿಸಿ ಕಳೆದ ಮೂರು ವರ್ಷಗಳಲ್ಲಿ ಅಂದಾಜಿಸಲಾಗಿದ್ದ ವ್ಯಕ್ತಿಗಳ ಒಟ್ಟಾರೆ ಆದಾಯದ ಮೇಲೆ ವಿಧಿಸಲಾಗಿರುವ ತೆರಿಗೆಯ ಜೊತೆಗೆ ಐಟಿಡಿ 2,432 ಪ್ರಕರಣಗಳಲ್ಲಿ ಪ್ರಾಸಿಕ್ಯೂಶನ್ ದೂರುಗಳನ್ನು ದಾಖಲಿಸಲಾಗಿದ್ದು, 4,264 ಕಾಂಪೌಂಡಿಂಗ್ ಅಪ್ಲಿಕೇಶನ್ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಕ್ರಿಮಿನಲ್ ಕೋರ್ಟ್ ಗಳಲ್ಲಿ ಇತ್ಯರ್ಥವಾಗಿರುವ ಪ್ರಕರಣಗಳ ಪೈಕಿ 116 ಜನರನ್ನು ಐಟಿ ಆಕ್ಟ್ ನ ಅಡಿಯಲ್ಲಿ ಅಕ್ರಮ ಎಸಗಿರುವುದು ಸಾಬೀತಾಗಿದ್ದರಿಂದ ಅಪರಾಧಿಗಳೆಂದು ಘೋಷಿಸಲಾಗಿದೆ  ಎಂದು ಸಂತೋಷ್ ಕುಮಾರ್ ಗಂಗ್ವರ್ ತಿಳಿಸಿದ್ದಾರೆ. 
SCROLL FOR NEXT