ಸಂಗ್ರಹ ಚಿತ್ರ 
ದೇಶ

ಮುಂಬೈನಲ್ಲಿ ಮತ್ತೊಬ್ಬ ಶಂಕಿತ ಇಸಿಸ್ ಏಜೆಂಟ್ ಬಂಧನ

ಉತ್ತರಪ್ರದೇಶದ ಉಗ್ರ ನಿಗ್ರಹ ತಂಡದೊಂದಿಗೆ ಕೈಜೋಡಿಸಿದ್ದ ಮುಂಬೈ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಮತ್ತೊಬ್ಬ...

ಮುಂಬೈ: ಉತ್ತರಪ್ರದೇಶದ ಉಗ್ರ ನಿಗ್ರಹ ತಂಡದೊಂದಿಗೆ ಕೈಜೋಡಿಸಿದ್ದ ಮುಂಬೈ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಮತ್ತೊಬ್ಬ ಶಂಕಿತ ಇಸಿಸ್ ಏಜೆಂಟ್'ವೊಬ್ಬನನ್ನು ಬುಧವಾರ ರಾತ್ರಿ ಬಂಧನಕ್ಕೊಳಪಡಿಸಿದೆ. 
ನಿನ್ನೆಯಷ್ಟೇ ಉತ್ತರಪ್ರದೇಶ ಉಗ್ರ ನಿಗ್ರಹ ಪಡೆ ಅಧಿಕಾರಿಗಳು ಫೈಜಾಬಾದ್ ನಲ್ಲಿ ಶಂಕಿತ ಇಸಿಸ್ ಏಜೆಂಟ್ ವೊಬ್ಬನನ್ನು ಬಂಧಿಸಿ, ವಿಚಾರಣೆ ನಡೆಸಿತ್ತು. ಬಂಧಿತನನ್ನು ಅಫ್ತಾಬ್ ಅಲಿ ಎಂದು ಗುರ್ತಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಬ್ಬ ಶಂಕಿತನನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದೆ. 
ಬಂಧನಕ್ಕೊಳಗಾಗಿರುವ ಶಂಕಿತನನ್ನು ಅಲ್ತಾಫ್ ಅಲಿ ಎಂದು ಹೇಳಲಾಗುತ್ತಿದ್ದು, ಯೂಸುಫ್ ಮಜಿಲ್ ಎಂಬ ಕಟ್ಟಡದಲ್ಲಿ ಈತನನ್ನು ಬಂಧಿಸಿದ್ದಾರೆ. 
 ಇಸಿಸ್ ಉಗ್ರ ಸಂಘಟನೆ ಈ ವರೆಗೂ ನಡೆಸಿದ್ದ ದಾಳಿಗಳಲ್ಲಿ ಅಲ್ತಾಫ್ ಕೂಡ ಭಾಗಿಯಾಗಿದ್ದು, ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.ಇಸಿಸ್ ಉಗ್ರ ಸಂಘಟನೆ ನೀಡಿದ ಸೂಚನೆಯಂತೆ ಬ್ಯಾಂಕ್ ಗಳಲ್ಲಿ ಹಣವನ್ನು ವರ್ಗಾವಣೆ ಮಾಡುತ್ತಿದ್ದ. ಖಚಿತ ಮಾಹಿತಿ ಆಧಾರದ ಮೇರೆಗೆ ಅಧಿಕಾರಿಗಳು ಇಂದು ಬಂಧನಕ್ಕೊಳಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel