ನವದೆಹಲಿ: ಸಿಯಾಚಿನ್ ಗ್ಲೇಸಿಯರ್ ಬಳಿ ಪಾಕಿಸ್ತಾನದ ಜೆಟ್ ವಿಮಾನಗಳ ಹಾರಾಟದ ಬಗ್ಗೆ ಪಾಕ್ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ಆದರೆ ಭಾರತೀಯ ಸೇನೆ ವಾಯು ಗಡಿ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಪಾಕಿಸ್ತಾನ ವಾಯು ಪಡೆ ಸಿಯಾಚಿನ್ ಗ್ಲೇಸಿಯರ್ ಪ್ರದೇಶದ ಬಳಿ ಸಮರಾಭ್ಯಾಸ ನಡೆಸುತ್ತಿದ್ದು, ಜೆಟ್ ವಿಮಾನಗಳ ಹಾರಾಟ ನಡೆದಿದೆ. ಇದನ್ನೆ ಪಾಕ್ ಮಾಧ್ಯಮಗಳು ಪಾಕ್ ವಾಯು ಸೇನೆ ಭಾರತೀಯ ವಾಯುಗಡಿ ಉಲ್ಲಂಘನೆ ಮಾಡಿದೆ ಎಂಬ ಅರ್ಥ ಬರುವ ರೀತಿಯಲ್ಲಿ ವರದಿ ಪ್ರಕಟಿಸಿದ್ದವು. ಭಾರತೀಯ ಸೇನೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಪಾಕಿಸ್ತಾನ ವಾಯುಗಡಿ ಉಲ್ಲಂಘನೆಯಾಗಿಲ್ಲ ಎಂದು ಹೇಳಿದೆ.
ಸಿಯಾಚಿನ್ ಕಾಶ್ಮೀರದ ಉತ್ತರ ಭಾಗವಾಗಿದ್ದು, 1984 ರಿಂದಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ಈ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.
ಪಾಕಿಸ್ತಾನದ ಎಲ್ಲಾ ಸೇನಾ ನೆಲೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಪ್ರಾರಂಭವಾಗಿದ್ದು, ಪಾಕ್ ನ ವಾಯು ಸೇನೆ ಮುಖ್ಯಸ್ಥ ಸೋಹೈಲ್ ಅಮಾನ್ ಸ್ಕಾರ್ಡು ಫಾರ್ವರ್ಡ್ ಬೇಸ್ ಗೆ ಭೇಟಿ ನೀಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಪ್ರಕಟಿಸಿವೆ.
ಭಾರತೀಯ ಸೇನೆ ಪಾಕಿಸ್ತಾನ ಪ್ರೇರೇಪಿತ ಭಯೋತ್ಪಾದನಾ ಕೃತ್ಯಗಳಿಗೆ ಪ್ರತೀಕಾರವಾಗಿ ಗಡಿನಿಯಂತ್ರಣ ರೇಖೆಯಲ್ಲಿ ದಾಳಿ ನಡೆಸಿ ನೌಶೇರಾ ಸೆಕ್ಟರ್ ನ ಹಲವು ಸೇನಾ ನೆಲೆಗಳಿಗೆ ಹಾನಿಯುಂಟುಮಾಡಿರಿವ ಬೆನ್ನಲ್ಲೇ ಪಾಕ್ ನಿ ನಿಂದ ವಾಯುಗಡಿ ಉಲ್ಲಂಘನೆಯಾಗಿರುವ ಆರೋಪ ಕೇಳಿಬಂದಿತ್ತು.