ಪದ್ಮಾವತಿ ಚಿತ್ರ ವಿವಾದ: ಸಿನಿಮಾವನ್ನು ನಾನು ಸಿನಿಮಾವಾಗಿಯೇ ನೋಡುತ್ತೇನೆ- ಕೇಂದ್ರ ಸಚಿವ ನಖ್ವಿ
ಸಿನಿಮಾವನ್ನು ನಾನು ಸಿನಿಮಾವಾಗಿಯೇ ನೋಡುತ್ತೇನೆ ಎಂದು ಪದ್ಮಾವತಿ ಚಿತ್ರ ವಿವಾದ ಕುರಿತಂತೆ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು ಭಾನುವಾರ ಹೇಳಿದ್ದಾರೆ...
ಮುಂಬೈ: ಸಿನಿಮಾವನ್ನು ನಾನು ಸಿನಿಮಾವಾಗಿಯೇ ನೋಡುತ್ತೇನೆ ಎಂದು ಪದ್ಮಾವತಿ ಚಿತ್ರ ವಿವಾದ ಕುರಿತಂತೆ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು ಭಾನುವಾರ ಹೇಳಿದ್ದಾರೆ.
ಪದ್ಮಾವತಿ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಹಲವೆಡೆ ನಡೆಯುತ್ತಿರುವ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಸಿನಿಮಾವನ್ನು ನಾನು ಸಿನಿಮಾವಾಗಿಯೇ ನೋಡುತ್ತೇನೆ. ಅದರ ಇತಿಹಾಸವಾಗಲೀ ಅಥವಾ ಭೂಗೋಳ ಕುರಿತಂತಾಗಲೀ ಆಳಕ್ಕೆ ಇಳಿದು ನೋಡುವುದಿಲ್ಲ ಎಂದು ಹೇಳಿದ್ದಾರೆ.
ನಾನು ಚಿತ್ರಕ್ಕೆ ಬೆಂಬಲವನ್ನಾಗಲೀ ಅಥವಾ ವಿರೋಧವನ್ನಾಗಲೀ ವ್ಯಕ್ತಪಡಿಸುವುದಿಲ್ಲ. ಸಿನಿಮಾದಲ್ಲಿ ಇಷ್ಟವಾಗುವುದನ್ನು ಒಪ್ಪಿಕೊಳ್ಳಬೇಕು. ಇಲ್ಲದೇ ಇರುವುದನ್ನು ಬಿಟ್ಟುಬಿಡಬೇಕು ಎಂದು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.