ಶರಣಾದ ಮಜೀದ್ ಇರ್ಶಾದ್ ಖಾನ್ 
ದೇಶ

ತಾಯಿಯ ಕಣ್ಣೀರಿಗೆ ಸೋತು ಉಗ್ರ ಸಂಘಟನೆ ತೊರೆದು ಪೊಲೀಸರಿಗೆ ಶರಣಾದ ಕಾಶ್ಮೀರ ಫುಟ್ಬಾಲಿಗ!

ಕುಖ್ಯಾತ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಸೇರಿದ್ದ 20 ವರ್ಷದ ಕಾಶ್ಮೀರಿ ಫುಟ್ಬಾಲ್ ಆಟಗಾರ ಮಜೀದ್ ಇರ್ಶಾದ್ ಖಾನ್​ ಕೊನೆಗೂ ತನ್ನ ತಾಯಿಯ ಕಣ್ಣೀರಿಗೆ ಸೋತು ಇದೀಗ ಜಮ್ಮು ಕಾಶ್ಮೀರ ಭದ್ರತಾ ಪಡೆಗೆ ಶರಣಾಗಿದ್ದಾನೆ.

ಶ್ರೀನಗರ: ಕುಖ್ಯಾತ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಸೇರಿದ್ದ 20 ವರ್ಷದ ಕಾಶ್ಮೀರಿ ಫುಟ್ಬಾಲ್ ಆಟಗಾರ ಮಜೀದ್ ಇರ್ಶಾದ್ ಖಾನ್​ ಕೊನೆಗೂ ತನ್ನ ತಾಯಿಯ ಕಣ್ಣೀರಿಗೆ ಸೋತು ಇದೀಗ ಜಮ್ಮು ಕಾಶ್ಮೀರ ಭದ್ರತಾ ಪಡೆಗೆ  ಶರಣಾಗಿದ್ದಾನೆ. 
ಮೂಲಗಳ ಪ್ರಕಾರ ಮಜೀದ್ ಇರ್ಶಾದ್ ಖಾನ್ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕಕ್ಕೆ ಗುರುವಾರ ರಾತ್ರಿ 10.30ಕ್ಕೆ ಖಾನ್ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಅನಂತನಾಗ್​ ನಲ್ಲಿ ಸೇನೆಯ ಗುಂಡಿಗೆ  ಬಲಿಯಾದ ತನ್ನ ಸ್ನೇಹಿತ ಯವಾರ್ ನಿಸ್ಸರ್ ಶೆರ್ಗುರ್ಜಿ ಅಂತ್ಯಕ್ರಿಯೆಯ ಬಳಿಕ ಮಜೀದ್ ಇರ್ಶಾದ್ ಖಾನ್ ಎಲ್​ಇಟಿಗೆ ಸೇರುವ ನಿರ್ಧಾರ ತೆಗೆದುಕೊಂಡಿದ್ದ ಎನ್ನಲಾಗಿದೆ. ಅಂತೆಯೇ  ಎಲ್​ಇಟಿ ಸಂಘಟನೆ ಸೇರುವುದಾಗಿ  ಅಕ್ಟೋಬರ್ 29ರಂದು ಫೇಸ್ ​ಬುಕ್ ಮೂಲಕ ಸೂಚನೆ ನೀಡಿದ್ದ. 
ಖಾನ್ ನಾಪತ್ತೆ ಬಳಿಕ ಆತನ ತಾಯಿ ಆಳಿಯಾ ಬೇಗಂ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಗೆ ಅಲೆಯುತ್ತಿದ್ದರಂತೆ. ಬಳಿಕ ಆತ ಉಗ್ರ ಸಂಘಟನೆ ಸೇರಿದ್ದಾನೆ ಎಂದು ತಿಳಿದು ಕಣ್ಣೀರು ಹಾಕಿದ್ದರಂತೆ. ಈ  ವಿಡಿಯೋ ಕಾಶ್ಮೀರದಲ್ಲಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಈ ವಿಡಿಯೋ ನೋಡಿದ ಮಜೀದ್ ಇರ್ಶಾದ್ ಖಾನ್ ಕೊನೆಗೂ ತಾಯಿ ಕಣ್ಣೀರಿಗೆ ಸೋತು ಉಗ್ರ ಸಂಘಟನೆ ತೊರೆದು ಪೊಲೀಸರಿಗೆ ಶರಣಾಗಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನಂತನಾಗ್ ಹಿರಿಯ ಪೊಲೀಸ್ ಅಧೀಕ್ಷಕ ಅಲ್ತಾಫ್ ಅಹಮದ್ ಅವರು, ಆತ ಮರಳಿ ಬರಲು ಬೇಕಾಗುವ ಎಲ್ಲಾ ಸಹಾಯ ಮಾಡಲು ನಾವು ಸಿದ್ಧ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ