ದೇಶ

ರಾಜಸ್ಥಾನ ರಾಜ್ಯಸಭೆ ಚುನಾವಣೆ: ಕೇಂದ್ರ ಸಚಿವ ಅಲ್ಫೋನ್ಸ್ ಬಿಜೆಪಿ ಅಭ್ಯರ್ಥಿ!

Srinivasamurthy VN
ನವದೆಹಲಿ: ರಾಜಸ್ಥಾನ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಪ್ರವಾಸೋಧ್ಯಮ ಸಚಿವ ಕೆಜೆ ಅಲ್ಫೋನ್ಸ್ ಅವರು ಆಯ್ಕೆಯಾಗಿದ್ದಾರೆ.
ಭಾನುವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಕೇಂದ್ರ ಸಚಿವ ಕೆಜೆ ಅಲ್ಫೋನ್ಸ್ ಅವರನ್ನು ರಾಜಸ್ಥಾನ ರಾಜ್ಯಸಭೆ ಚುನಾವಣೆಯ ಬಿಜೆಪಿ  ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.
ಇನ್ನು ಈ ಹಿಂದೆ ರಾಜಸ್ಥಾನದಿಂದ ರಾಜ್ಯಸಭೆ ಆರಿಸಿ ಬಂದಿದ್ದ ಎಂ ವೆಂಕಯ್ಯನಾಯ್ಡು ಅವರು ಉಪ ರಾಷ್ಟ್ಪಪತಿಯಾಗಿ ಆಯ್ಕೆಯಾದ ಬಳಿಕ ಈ ಸ್ಥಾನ ತೆರವಾಗಿತ್ತು. ಹೀಗಾಗಿ ಇದೀಗ ಈ ಸ್ಥಾನಕ್ಕೆ ಕೆಜೆ ಅಲ್ಫೋನ್ಸ್ ಅವರನ್ನು ಆಯ್ಕೆ  ಮಾಡಲಾಗಿದೆ. ಅಕ್ಟೋಬರ್ 30ರಂದು ರಾಜ್ಯಸಭೆ ಉಪ ಚನಾವಣೆಯ ಪ್ರಕಟಣೆ ಹೊರ ಬೀಳಲಿದ್ದು, ನಾಮಪತ್ರ ಸಲ್ಲಿಕೆ ಮಾಡಲು ನವೆಂಬರ್ 6 ಕೊನೆಯ ದಿನಾಂಕವಾಗಿದೆ.
ಅಲ್ಫೋನ್ಸ್ ಜಯ ಖಚಿತ
ಇನ್ನು ಒಟ್ಟು 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಬಿಜೆಪಿ ಒಟ್ಟು 160 ಶಾಸಕರನ್ನು ಹೊಂದಿದೆ. ಪ್ರತಿಪಕ್ಷ ಕಾಂಗ್ರೆಸ್ ಕೇವಲ 24 ಶಾಸಕರ ಬಲ ಹೊಂದಿದೆ. ಹೀಗಾಗಿ ಅಲ್ಫೋನ್ಸ್ ಅವರ  ಗೆಲುವು ಖಚಿತ ಎಂದು ಹೇಳಲಾಗುತ್ತಿದೆ.
SCROLL FOR NEXT