ದೇಶ

ರೋಹಿಂಗ್ಯ ಮುಸ್ಲಿಂ ನಿರಾಶ್ರಿತರಿಗೆ ಸಹಾಯ ಮಾಡಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ವಿಶ್ವಸಂಸ್ಥೆ ಕರೆ

Srinivas Rao BV
ವಿಶ್ವಸಂಸ್ಥೆ: ರೋಹಿಂಗ್ಯ ಮುಸ್ಲಿಂ ನಿರಾಶ್ರಿತರಿಗೆ ಸಹಾಯ ಮಾಡಲು ನಡೆಯುತ್ತಿರುವ ಯತ್ನಕ್ಕೆ ಕೈ ಜೋಡಿಸಬೇಕೆಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ವಿಶ್ವಸಂಸ್ಥೆ ಕರೆ ನೀಡಿದೆ. 
ಮಯನ್ಮಾರ್ ನಲ್ಲಿ ತಮ್ಮ ನಿವಾಸಗಳನ್ನು ತೊರೆಯುವಂತಾಗಿರುವ ರೋಹಿಂಗ್ಯ ಮುಸ್ಲಿಮರ ಬಗ್ಗೆ ನಮ್ಮ ಕಾಳಜಿಯನ್ನು ಸ್ಪಷ್ಟಪಡಿಸಿದ್ದೇವೆ. ನಾವು ಪಡೆಯುತ್ತಿರುವ ವರದಿಗಳು ಹಾಗೂ ಚಿತ್ರಣಗಳು ಹೃದಯ ವಿದ್ರಾವಕವಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ರಾಜಕೀಯದ ಹೊರತಾಗಿ ಅಂತಾರಾಷ್ಟ್ರೀಯ ಸಮುದಾಯ ರೋಹಿಂಗ್ಯ ಮುಸ್ಲಿಮ್ ನಿರಾಶ್ರಿತರಿಗೆ ಸಹಾಯ ಮಾಡಬೇಕು, ಪ್ರಸ್ತುತ ರೋಹಿಂಗ್ಯ ಮುಸ್ಲಿಮರಿಗೆ ಸಹಾಯ ಅಗತ್ಯವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 
SCROLL FOR NEXT