ಸ್ವಯಂ ಘೋಷಿತ ದೇವ ಮಾನವ ಗುರ್ಮಿತ್ ಕಾರಿನ ಮಾಜಿ ಚಾಲಕ ಕಟ್ಟಾ ಸಿಂಗ್ 
ದೇಶ

ಗುರ್ಮಿತ್ ವಿರುದ್ಧದ ಕೊಲೆ ಪ್ರಕರಣ ವಿಚಾರಣೆ: 5 ವರ್ಷಗಳ ಬಳಿಕ ಮೌನ ಮುರಿದ ಪ್ರಮುಖ ಸಾಕ್ಷಿದಾರ

ಗುರ್ಮಿತ್ ರಾಮ್ ರಹೀಮ್ ವಿರುದ್ಧ ಕೇಳಿಬಂದಿದ್ದ ಕೊಲೆ ಪ್ರಕರಣ ಸಂಬಂಧ ಸಾಕ್ಷಿ ಹೇಳಲು ಮುಂದಾಗಿ ಡೇರಾ ಗೂಂಡಾಗಳ ಬೆದರಿಕೆಗಳಿಗೆ ಹೆದರಿ ಹಿಂದಕ್ಕೆ ಸರಿದಿದ್ದ ಸಾಕ್ಷಿದಾರರು, 5 ವರ್ಷಗಳ ಬಳಿಕ ಇದೀಗ ಗುರ್ಮಿತ್...

ಪಂಚಕುಲ: ಗುರ್ಮಿತ್ ರಾಮ್ ರಹೀಮ್ ವಿರುದ್ಧ ಕೇಳಿಬಂದಿದ್ದ ಕೊಲೆ ಪ್ರಕರಣ ಸಂಬಂಧ ಸಾಕ್ಷಿ ಹೇಳಲು ಮುಂದಾಗಿ ಡೇರಾ ಗೂಂಡಾಗಳ ಬೆದರಿಕೆಗಳಿಗೆ ಹೆದರಿ ಹಿಂದಕ್ಕೆ ಸರಿದಿದ್ದ ಸಾಕ್ಷಿದಾರರು, 5 ವರ್ಷಗಳ ಬಳಿಕ ಇದೀಗ ಗುರ್ಮಿತ್ ವಿರುದ್ಧ ಸಾಕ್ಷಿ ಹೇಳಲು ಮುಂದಾಗಿದ್ದಾರೆ. 
2002ರ ವರೆಗೂ ಸ್ವಯಂ ಘೋಷಿತ ದೇವ ಮಾನವ ಗುರ್ಮಿತ್ ಕಾರು ಚಾಲಕನಾಗಿ ಕೆಲಸ ಮಾಡಿದ್ದ ಕಟ್ಟಾ ಸಿಂಗ್ ಅವರು ಇದೀಗ ಗುರ್ಮಿತ್ ವಿರುದ್ಧ ಸಾಕ್ಷಿ ಹೇಳಲು ಮುಂದಾಗಿದ್ದಾರೆ. 
ಕಟ್ಟಾ ಸಿಂಗ್ ಅವರು ಪ್ರಕರಣಗಳಲ್ಲಿ ಸಿಬಿಐ ಪರ ಪ್ರಮುಖ ಸಾಕ್ಷಿಯಾಗಿದ್ದರು ಎಂದೇ ಹೇಳಲಾಗುತ್ತಿತ್ತು. 2007 ರಲ್ಲು ಗುರ್ಮಿತ್ ವಿರುದ್ಧ ಸಾಕ್ಷಿ ಹೇಳಲು ಕಟ್ಟಾ ಸಿಂಗ್ ಅವರು ಮುಂದಾಗಿದ್ದರು. ಆದರೆ, 2012ರಲ್ಲಿ ತಮ್ಮ ಹೇಳಿಕೆಗಳನ್ನು ಬದಲಾಯಿಸಿದ್ದರು. ಇದೀಗ ಪರಿಸ್ಥಿತಿಗಳು ಬದಲಾಗಿರುವ ಹಿನ್ನಲೆಯಲ್ಲಿ ಸಾಕ್ಷಿ ಹೇಳಲು ಕಟ್ಟಾ ಸಿಂಗ್ ಅವರು ಮುಂದಾಗಿದ್ದಾರೆಂದು ಕಟ್ಟಾ ಸಿಂಗ್ ಅವರ ಪರ ವಕೀಲ ಹೇಳಿದ್ದಾರೆ. 
ಪ್ರಕರಣ ಸಂಬಂಧ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಲಾಗಿತ್ತು. ಗುರ್ಮಿತ್ ಅವರ ಬೆಂಬಲಿಗರು ಎಲ್ಲಿ ನನ್ನನ್ನು ಹಾಗೂ ನನ್ನ ಪುತ್ರನನ್ನು ಹತ್ಯೆ ಮಾಡಿ ಬಿಡುತ್ತಾರೋ ಎಂಬ ಭಯದಲ್ಲಿ ನಾನು ಹಿಂದಕ್ಕೆ ಸರಿದಿದ್ದೆ ಎಂದು ಕಟ್ಟಾ ಸಿಂಗ್ ಅವರು ಹೇಳಿಕೊಂಡಿದ್ದಾರೆ. 
ಪ್ರಕರಣ ಸಂಬಂಧ ತಮ್ಮ ಹೇಳಿಕೆಯನ್ನು ದಾಖಲು ಮಾಡಿಕೊಳ್ಳುವಂತೆ ಕಟ್ಟಾ ಸಿಂಗ್ ಅವರು ಇದೀಗ ಸಿಬಿಐ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದಾರೆ. 
ಕಟ್ಟಾ ಸಿಂಗ್ ಅವರ ಈ ಮನವಿಯನ್ನು ಪುರಸ್ಕರಿಸುವ ಸಿಬಿಐ ನ್ಯಾಯಾಲಯ, ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದ್ದು ಸೆ.22 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ವಿಚಾರಣಾ ದಿನದಂತೆ ಕಟ್ಟಾ ಸಿಂಗ್ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕೋ ಅಥವಾ ಇಲ್ಲವೋ ಎಂಬುದರ ಬಗ್ಗೆ ನ್ಯಾಯಾಲಯ ನಿರ್ಧಾರ ಕೈಗೊಳ್ಳಲಿದೆ. 
ಈ ನಡುವೆ ಗುರ್ಮಿತ್ ವಿರುದ್ಧ ಕೇಳಿ ಬಂದಿರುವ 2 ಕೊಲೆ ಪ್ರಕರಣಗಳ ಸಂಬಂಧ ವಿಚಾರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ಸಿರ್ಸಾ ಮೂಲದ ಪತ್ರಕರ್ತ ರಾಮ್ ಚಂದ್ರ ಛತ್ರಪತಿ ಮತ್ತು ಡೇರಾದ ಮಾಜಿ ವ್ಯವಸ್ಥಾಪಕ ರಂಜಿತ್ ಸಿಂಗ್ ಅವರ ಹತ್ಯೆ ಪ್ರಕರಣಗಳಲ್ಲಿ ಗುರ್ಮಿತ್ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣ ಸಂಬಂಧ ಸಿಬಿಐ ನ್ಯಾಯಾಲಯದ ಇಂದು ವಿಚಾರಣೆ ನಡೆಸುತ್ತಿದೆ.
ಪತ್ರಕರ್ತ ರಾಮಚಂದ್ರ ಅವರು ಸಾಧ್ವಿಯರ ಮೇಲಿನ ಅತ್ಯಾಚಾರ ಎಸಗಿರುವುದನ್ನು ತಮ್ಮ ಪತ್ರಿಕೆಯಲ್ಲಿ ವರದಿ ಮಾಡಿ ಪ್ರಕರಣಗಳನ್ನು ಬೆಳಕಿಗೆ ತಂದಿದ್ದರು. ಗುರ್ಮಿತ್ ಅತ್ಯಾಚಾರ ಕುರಿತ ಅನಾಮಧೇಯ ಪತ್ರವನ್ನು ಛತ್ರಪತಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದಾಗ ಬಳಿಕ 2002ರಲ್ಲಿ ಛತ್ರಪತಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. 
ಇನ್ನು ಈ ಪತ್ರವನ್ನು ಡೇರಾದ ಮಾಜಿ ವ್ಯವಸ್ಥಾಪಕರಾಗಿದ್ದ ರಂಜಿತ್ ಸಿಂಗ್ ಅವರು ಬರೆದಿದ್ದರು ಎಂಬ ಅನುಮಾನದ ಮೇಲೆ ರಂಜಿಸ್ ಸಿಂಗ್ ಅವರನ್ನೂ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಎರಡೂ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ

ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಬಸ್‌ಗೆ ಬೆಂಕಿ; ಚಾಲಕ-ಕ್ಲೀನರ್ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಸೇಫ್, Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್