ರೇವಾರಿ: ಶಾಲಾ ಬಸ್ ಹರಿದು 5 ವರ್ಷದ ಬಾಲಕನೊರ್ವ ಮೃತಪಟ್ಟಿರುವ ಘಟನೆ ಹರಿಯಾಣ ರಾಜ್ಯದ ರೇವಾರಿ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಹಿಮಾಂಗ್ (5) ಮೃತಪಟ್ಟ ಬಾಲಕನೆಂದು ಗುರ್ತಿಸಲಾಗಿದೆ. ಶಾಲಾ ವಾಹನದ ಚಾಲಕ ಬಸ್'ನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿರುವಾಗ ಬಾಲಕ ವಾಹನದ ಚಕ್ರಕ್ಕೆ ಸಿಲುಕಿಕೊಂಡಿದ್ದಾನೆ. ಪರಿಣಾಮ ಸ್ಥಳದಲ್ಲಿ ಬಾಲಕ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ತನಿಖಾಧಿಕಾರಿ ಪ್ರೀತ್ ಸಿಂಗ್ ಅವರು ಹೇಳಿದ್ದಾರೆ.