ನವದೆಹಲಿ : ದಲಿತರು ಎನ್ ಡಿಎ ಮೈತ್ರಿಕೂಟ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ದೇಶದ ಮುಂದಿನ ಪ್ರಧಾನಮಂತ್ರಿಯ ನಿರ್ಧರಿಸುವಲ್ಲಿ ಅವರ ಪಾತ್ರ ಮಹತ್ವದಾಗಿದೆ ಎಂದು ಕಾಂಗ್ರೆಸ್ ಮುಖಂಡ ನಿತಿನ್ ರಾವತ್ ಹೇಳಿದ್ಜಾರೆ.
ಕಾಂಗ್ರೆಸ್ ಪರಿಶಿಷ್ಟ ಜಾತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ರಾವತ್, ಉತ್ತಮ ಭವಿಷ್ಯಕ್ಕಾಗಿ ರಾಹುಲ್ ಗಾಂಧಿ ಅವರ ನಾಯಕತ್ವದ ಕಡೆಗೆ ದಲಿತ ಯುವ ಜನರು ಆಕರ್ಷಿತಗೊಂಡಿದ್ದಾರೆ. ಹೀಗಾಗಿ ಬೇರೆ ನಾಯಕರಿಗಿಂತಲೂ ಕಾಂಗ್ರೆಸ್ ಅಧ್ಯಕ್ಷರು ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದಲಿತ ಮತಗಳ ಮೇಲಿನ ಕಣ್ಣನಿಂದ ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ಈ ವರ್ಗದ ನಾಯಕ ಅಂಬೇಡ್ಕರ್ ಅವರಿಗೆ ಗೌರವ ಸೂಚಿಸುವ ನಾಟಕವಾಡುತ್ತಿದ್ದಾರೆ . ಎನ್ ಡಿಎ ಸರ್ಕಾರದ ಅವಧಿಯಲ್ಲಿ ಶಿಕ್ಷಣ, ಉದ್ಯೋಗವನ್ನು ನಿರಾಕರಿಸಲಾಗಿದೆ.
ಈ ಆಕ್ರೋಶ ಮುಂದಿನ ಪ್ರಧಾನಿಯನ್ನು ನಿರ್ಧರಿಸಲಿದೆ ಎಂದು ನಿತಿನ್ ರಾವತ್ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.