ನವದೆಹಲಿ: ಕಳೆದ ಕೆಲವು ತಿಂಗಳಿನ ಹಿಂದೆ ಬಯಲಿಗೆ ಬಂದಿರುವ ಬ್ತಾಂಕ್ ಹಗರಣಗಳಿಗೆ ಸಂಬಂಧಿಸಿದಂತೆ ಹಾಜರಾಗಿ ಉತ್ತರಿಸುವಂತೆ ಸಂಸತ್ ಸಮಿತಿಯೊಂದು ಆರ್ ಬಿಐ ಗೌರ್ನರ್ ಗೆ ಸೂಚನೆ ನೀಡಿದೆ.
ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಸಂಸತ್ ನ ಸ್ಥಾಯಿ ಸಮಿತಿಯ ಮುಖ್ಯಸ್ಥ ಎಂ ವೀರಪ್ಪ ಮೋಯ್ಲಿ, ಬ್ಯಾಂಕಿಂಗ್ ಸೆಕ್ಟರ್ ಗೆ ಸಂಬಂಧಿಸಿದಂತೆ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಸಂಸತ್ ಸ್ಥಾಯಿ ಸಮಿತಿಯ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಆರ್ ಬಿಐ ಗೌರ್ನರ್ ಅವರಿಗೆ ಮೇ.17 ರಂದು ಹಾಜರಾಗಲು ಕೇಳಲಾಗಿದೆ.
ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ಪ್ರಕರ ಆರ್ ಬಿಐಗೆ ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಸಂಬಂಧಿಸಿದ ವಿಷಗಳೊಂದಿಗೆ ವ್ಯವಹರಿಸಲು ಅಧಿಕಾರವಿಲ್ಲ. ಈ ನಿಟ್ಟಿನಲ್ಲಿ ಆರ್ ಬಿಐ ಗೆ ಯಾವ ರೀತಿಯ ಅಧಿಕಾರ ಬೇಕು ಎಂಬ ಬಗ್ಗೆ ನಮಗೆ ಮಾಹಿತಿ ಬೇಕು ಎಂದು ಸ್ಥಾಯಿ ಸಮಿತಿಯ ಮತ್ತೊಂದಷ್ಟು ಸದಸ್ಯರು ಪ್ರಶ್ನಿಸಿದ್ದಾರೆ.
ಸ್ಥಾಯಿ ಸಮಿತಿ ಸಭೆಯಲ್ಲಿ ಬ್ಯಾಂಕ್ ಗಳಲ್ಲಿ ನಡೆದಿರುವ ಹಗರಣಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ.