ಶ್ರೀನಗರ: ಸ್ಥಳೀಯ ಯುವಕರನ್ನು ಉಗ್ರ ತರಭೇತಿಗಾಗಿ ಪಾಕಿಸ್ತಾನ ಆಕ್ರಮಿಕ ಕಾಶ್ಮೀರಕ್ಕೆ ಕಳುಹಿಸುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿ ಹಾಗೂ ಹಿಜ್ಬುಲ್ ಉಗ್ರ ಸಂಘಟನೆ ಕಾರ್ಯಕರ್ತನೊಬ್ಬನನ್ನು ಎನ್ಐಎ ಅಧಿಕಾರಿಗಳು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಫೆರೋಜ್ ಅಹ್ಮದ್ ಲೋನ್ ಬಂಧನಕ್ಕೊಳಗಾಗಿರುವ ಪೊಲೀಸ್ ಅಧಿಕಾರಿ ಎಂದು ಹೇಳಲಾಗುತ್ತಿದೆ.
ಫೆರೋಜ್ ಜಮ್ಮುವಿನ ಅಂಬ್ಫಾಲಾ ಜೈಲಿನಲ್ಲಿ ಕಳೆದ 5 ತಿಂಗಳಿನಿಂದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ.
ಇದಲ್ಲದೆ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಾರ್ಯಕರ್ತನಾಗಿದ್ದ ಇಶಾಖ್ ಪಲ್ಲ ಎಂಬಾದನನ್ನೂ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ.
ಕೆಲ ದಿನಗಳ ಹಿಂದಶ್ಟೇ ಸುಹೈಲ್ ಅಹ್ಮದ್ ಭಟ್ ಮತ್ತು ದಾನಿಶ್ ಗುಲಾಂ ಲನೋನ್ ಎಂಬುವವರನ್ನು ಭದ್ರತಾ ಪಡೆಗಳು ಬಂಧನಕ್ಕೊಳಪಡಿಸಿದ್ದರು. ಇಬ್ಬರೂ ಇಶರ್ ಪಲ್ಲನಿಂದ ಪ್ರೇರಿತರಾಗಿ ಉಗ್ರ ತರಭೇತಿ ಪಡೆಯಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬಂಧನಕ್ಕೊಳಪಡಿಸಲಾಗಿತ್ತು.
ಬಂಧಿತ ದುಷ್ಕರ್ಮಿಗಳು ಶ್ರೀನಗರ ಕೇಂದ್ರೀಯ ಕಾರಾಗೃಹದಲ್ಲಿ ಸಭೆ ನಡೆಸಿ ಮಾತುಕತೆ ನಡೆಸುತ್ತಿದ್ದರು. 2017ರ ಅಕ್ಟೋಬರ್ 25 ರಂದು ಕಾರಾಗೃಹದಲ್ಲಿ ಸಭೆ ನಡೆಸಿದ್ದರು. ಆರೋಪಿಗಳು ಬ್ಲಾಕ್'ಬೆರ್ರಿ ಮೆಸೆಂಜರ್ ನಿಂದ ಒಬ್ಬರಿಗೊಬ್ಬರು ಸಂಪರ್ಕಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬಂಧನಕ್ಕೊಳಗಾಗಿರುವ ಇಶಕ್ ನನ್ನು ಎನ್ಐಎ ವಿಶೇಷ ನ್ಯಾಯಾಲಯ 10 ದಿನಗಳ ಕಾಲ ಎನ್ಐಎ ವಶಕ್ಕೆ ನೀಡಿದ್ದು, ಪೊಲೀಸ್ ಅಧಿಕಾರಿಯನ್ನು ಶೀಘ್ರದಲ್ಲಿಯೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos