ವಿವಾದಿತ ಜಾಹಿರಾತು (ಸಂಗ್ರಹ ಚಿತ್ರ) 
ದೇಶ

ಪಾನ್ ಮಸಾಲಾ ಜಾಹಿರಾತು: ಹಾಲಿವುಡ್ ನಟ ಪಿಯರ್ಸ್ ಬ್ರಾಸ್ನನ್ ಗೆ ದೆಹಲಿ ಸರ್ಕಾರದಿಂದ ಶೋಕಾಸ್ ನೋಟಿಸ್

ಪಾನ್ ಮಸಾಲಾ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಹಾಲಿವುಡ್ ನಟ ಪಿಯರ್ಸ್ ಬ್ರಾಸ್ನನ್ ಗೆ ದೆಹಲಿ ಸರ್ಕಾರ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನವದೆಹಲಿ: ಪಾನ್ ಮಸಾಲಾ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಹಾಲಿವುಡ್ ನಟ ಪಿಯರ್ಸ್ ಬ್ರಾಸ್ನನ್ ಗೆ ದೆಹಲಿ ಸರ್ಕಾರ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
'ರೆಮಿಂಗ್‌ಟನ್‌ ಸ್ಟೀಲ್‌' ಮತ್ತು 'ಎಂ16 ಏಜೆಂಟ್‌ ಜೇಮ್ಸ್‌ ಬಾಂಡ್‌' ಚಿತ್ರಗಳಲ್ಲಿ ಪತ್ತೆದಾರನ ಪಾತ್ರಗಳ ಮೂಲಕ ಖ್ಯಾತಿ ಪಡೆದಿರುವ ಪಿಯರ್ಸ್ ಬ್ರಾಸ್ನನ್, ಭಾರತ ಮೂಲದ ತಂಬಾಕು ಉತ್ಪನ್ನವೊಂದರ ಜಾಹಿರಾತಿನಲ್ಲಿ  ಕಾಣಿಸಿಕೊಳ್ಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ನಟ ಈ ವಿವಾದಿತ ಜಾಹಿರಾತು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ-2003ರ ಉಲ್ಲಂಘನೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ  ನಟ ಪಿಯರ್ಸ್ ಬ್ರಾಸ್ನನ್ ಶೋಕಾಸ್ ಜಾರಿ ಮಾಡಿದೆ.
ದೆಹಲಿ ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಎಸ್ ಕೆ ಆರೋರಾ ಅವರು ಈ ಜಾಹಿರಾತಿಗೆ ಸಂಬಂಧಿಸಿದಂತೆ ನಟ  ಪಿಯರ್ಸ್ ಬ್ರಾಸ್ನನ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ  ನೀಡಿದ ಅರೋರಾ ಅವರು, ಸಂಸ್ಥೆಯ ಮೂಲಕ ನಟನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಈ ಹಿಂದೆಯೂ ನೋಟಿಸ್ ನೀಡಲಾಗಿತ್ತು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯ ಬಂದಿರಲಿಲ್ಲ. ಹೀಗಾಗಿ ಮತ್ತೆ ನೋಟಿಸ್ ಜಾರಿ  ಮಾಡಿದ್ದೇವೆ ಎಂದು ಆರೋರಾ ಹೇಳಿದ್ದಾರೆ. ಅಲ್ಲದೆ ಮುಂದಿನ 10 ದಿನಗಳೊಳಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದು ಗಡವು ಕೂಡ ನೀಡಲಾಗಿದೆ ಎನ್ನಲಾಗಿದೆ.
ಇನ್ನು ಪ್ರಸ್ತುತ ನಟ  ಪಿಯರ್ಸ್ ಬ್ರಾಸ್ನನ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾದರೆ, ಅವರಿಗೆ 5 ಸಾವಿರ ದಂಡ ಮತ್ತು 2 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
2016ರಲ್ಲೇ ಜಾಹಿರಾತು ಕುರಿತು ಸ್ಪಷ್ಟನೆ ನೀಡಿದ್ದ ನಟ
ಭಾರತದಲ್ಲಿ ಪ್ರಕಟವಾಗಿರುವ 'ಪಾನ್‌ ಬಹಾರ್‌' ಜಾಹೀರಾತಿಗೆ ತಮ್ಮ ಚಿತ್ರವನ್ನು ಅನಧಿಕೃತವಾಗಿ ಬಳಸಿಕೊಳ್ಳಲಾಗಿದೆ ಎಂದು ಜೇಮ್ಸ್‌ ಬಾಂಡ್‌ ಖ್ಯಾತಿಯ ಐರಿಷ್‌ ನಟ ಪಿಯರ್ಸ್‌ ಬ್ರಾನ್ಸನ್‌ 2016ರಲ್ಲೇ ಆರೋಪಿಸಿದ್ದರು.  ಜಾಹೀರಾತನ್ನು ಕಂಡು ತಮಗೆ ಆಘಾತವಾಯಿತು ಎಂದು ಹೇಳಿದ್ದ ಬ್ರಾನ್ಸನ್, ''ಕ್ಯಾನ್ಸರ್‌ನಿಂದಾಗಿ ನನ್ನ ಮೊದಲ ಪತ್ನಿ, ಮಗಳು ಮತ್ತು ಅನೇಕ ಗೆಳೆಯರನ್ನು ಕಳೆದುಕೊಂಡಿದ್ದೇನೆ. ಈಗ ಕ್ಯಾನ್ಸರ್‌ ಗೆ ಕಾರಣವಾಗುವ ತಂಬಾಕು  ಉತ್ಪನ್ನಗಳಿಗೆ ನಾನು ಮಾಡೆಲ್‌ ಆಗಲು ಹೇಗೆ ಸಾಧ್ಯ? ನನ್ನ ಚಿತ್ರ ಬಳಸಿ ವಂಚಿಸಲಾಗಿದ್ದು, ತೀವ್ರ ಆಘಾತ ಮತ್ತು ದುಃಖವಾಗಿದೆ. ದಶಕಗಳ ಕಾಲ ಮಹಿಳೆಯ ಆರೋಗ್ಯ, ಪರಿಸರ ರಕ್ಷಣೆ ಮತ್ತಿತರ ವಿಷಯಗಳ ಬಗ್ಗೆ ಆಂದೋಲನ  ಮಾಡಿಕೊಂಡು ಬಂದವನು ನಾನು. ಪಾನ್‌ ಮಸಾಲಾ ಉತ್ಪನ್ನಕ್ಕೆ ನನ್ನ ಚಿತ್ರ ಬಳಸಿ ಚಾರಿತ್ಯಕ್ಕೆ ಧಕ್ಕೆ ತರಲಾಗಿದೆ. ತಾಜಾ ಉಸಿರು/ಹಲ್ಲಿನ ಬಿಳುಪಿನ ಉತ್ಪನ್ನದ ಜಾಹೀರಾತಿಗೆ ಸಹಿ ಹಾಕಿದ್ದೇನೆಯೇ ಹೊರತು, ಆರೋಗ್ಯಕ್ಕೆ  ಮಾರಕವಾದ ಯಾವುದೇ ಉತ್ಪನ್ನದ ಜಾಹೀರಾತಿನ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಬ್ರಾನ್ಸನ್ ಸ್ಪಷ್ಟೀಕರಣ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!